ವಿದೇಶಗಳಲ್ಲಿ ಕೊರೋನಾ ಉಲ್ಬಣ: ಮಾಸ್ಕ್‌ ಕಡ್ಡಾಯ ಬಳಕೆಗೆ ಕೇಂದ್ರ ಸರಕಾರ ಸೂಚನೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಚೀನಾ ಸಹಿತ ವಿಶ್ವದಲ್ಲಿ ಕೊರೋನಾ ಸೋಂಕಿನ ಪ್ರಮಾಣ ಏರಿಕೆ ಕಂಡಿದ್ದು, ಈ ಹಿನ್ನೆಲೆ ಭಾರತ ದಲ್ಲಿ ಆತಂಕ ಮನೆ ಮಾಡಿದೆ.

ಈಗಾಗಲೇ ದೇಶದಲ್ಲಿ ಎಚ್ಚರಿಕೆಯಿಂದ ಇರಲು ಎಲ್ಲಾ ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚನೆಯನ್ನು ನೀಡಿದ್ದು, ಇದರ ಭಾಗವಾಗಿ ಇಂದು . ಕೇಂದ್ರ ಆರೋಗ್ಯ ಸಚಿವ ಡಾ.ಮನ್ಸುಖ್ ಮಾಂಡವಿಯಾ ಅವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆಯು ನಡೆದಿದೆ.

ಸಭೆಯಲ್ಲಿ ಹಲವು ಅಂಶಗಳನ್ನು ಪ್ರಮುಖವಾಗಿ ಗಣನೆಗೆ ತೆಗೆದುಕೊಂಡಿದ್ದು, ಅದ್ರಲ್ಲೂ ಮುಖ್ಯವಾಗಿ ಜನರಿಗೆ ಮಾಸ್ಕ್‌ ಹಾಕಿಕೊಳ್ಳುವಂತೆ ಸೂಚನೆ ನೀಡಿದೆ.

ಒಳಾಂಗಣ ಅಥವಾ ಹೊರಾಂಗಣದಲ್ಲಿ ಕಿಕ್ಕಿರಿದ ಜಾಗದಲ್ಲಿದ್ದಾಗ ಮಾಸ್ಕ್‌ ಬಳಸಲು ಸೂಚಿಸಲಾಗಿದ್ದು, ಅದರಲ್ಲೂ, ಕೋಮಾರ್ಬಿಡಿಟಿ ಹೊಂದಿರುವ ಅಥವಾ ಹೆಚ್ಚಿನ ವಯಸ್ಸಿನವರಿಗೆ ಇದು ಹೆಚ್ಚು ಮುಖ್ಯವಾಗಿದೆ ಎಂದೂ ನೀತಿ ಆಯೋಗದ ಆರೋಗ್ಯ ಇಲಾಖೆಯ ಸದಸ್ಯ ಡಾ. ವಿ.ಕೆ. ಪಾಲ್ ಹೇಳಿದ್ದಾರೆ.

ಇದೇ ವೇಳೆ ಸದ್ಯಕ್ಕೆ ವಿಮಾನಯಾನ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಯಾವುದೇ ಬದಲಾವಣೆ ಇಲ್ಲ. ಆದರೆ, ನೀವು ಜಾಗರೂಕತೆಯಿಂದ ಇರಲು ತಿಳಿಸಿವೆ.

ಅದೇ ವೇಳೆ 27-28% ಜನರು ಮಾತ್ರ ಮೂರನೇ ಡೋಸ್‌ ಲಸಿಕೆ ತೆಗೆದುಕೊಂಡಿದ್ದಾರೆ. ಮುನ್ನೆಚ್ಚರಿಕೆ ಡೋಸ್ ತೆಗೆದುಕೊಳ್ಳಲು ನಾವು ಇತರರಿಗೆ, ವಿಶೇಷವಾಗಿ ಹಿರಿಯ ನಾಗರಿಕರಿಗೆ ಮನವಿ ಮಾಡುತ್ತೇವೆ. ಮೂರನೇ ಲಸಿಕೆಯ ಪ್ರಮಾಣವನ್ನು ಕಡ್ಡಾಯವಾಗಿದೆ ಮತ್ತು ಎಲ್ಲರಿಗೂ ತೆಗೆದುಕೊಳ್ಳುವಂತೆ ಮಾರ್ಗದರ್ಶನ ನೀಡಲಾಗುತ್ತದೆ ಎಂದೂ ಡಾ. ವಿ.ಕೆ. ಪಾಲ್ ಹೇಳಿದ್ದಾರೆ.

ಸಭೆಯ ಬಳಿಕ ಟ್ವಿಟ್ ಮಾಡಿದ ಕೇಂದ್ರ ಆರೋಗ್ಯ ಸಚಿವ ಮನ್ಸುಖ್‌ ಮಾಂಡವಿಯಾ,ಕೆಲವು ದೇಶಗಳಲ್ಲಿ ಹೆಚ್ಚುತ್ತಿರುವ ಕೋವಿಡ್-19 ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು, ತಜ್ಞರು ಮತ್ತು ಅಧಿಕಾರಿಗಳೊಂದಿಗೆ ಇಂದು ಪರಿಸ್ಥಿತಿಯನ್ನು ಪರಿಶೀಲಿಸಿದ್ದೇವೆ. ಕೋವಿಡ್ ಇನ್ನೂ ಮುಗಿದಿಲ್ಲ. ನಾನು ಎಲ್ಲರನ್ನೂ ಎಚ್ಚರಿಕೆಯಿಂದ ಇರಲು ಮತ್ತು ಹೆಚ್ಚು ಕಣ್ಗಾವಲು ಸೂಚಿಸಿದ್ದೇನೆ. ನಾವು ಯಾವುದೇ ಪರಿಸ್ಥಿತಿಯನ್ನು ನಿರ್ವಹಿಸಲು ಸಿದ್ಧರಿದ್ದೇವೆ ಎಂದಿದ್ದಾರೆ.

ಸಭೆಯಲ್ಲಿ ನೀತಿ ಆಯೋಗ ಸದಸ್ಯರಾದ ಡಾ. ವಿ. ಕೆ ಪಾಲ್, ಕೋವಿಡ್-19 ವರ್ಕಿಂಗ್ ಗ್ರೂಪ್ NTAGIನ ಮುಖ್ಯಸ್ಥ ಡಾ. ಎನ್‌ಕೆ ಅರೋರಾ, ಐಸಿಎಂಆರ್‌ ಡಿಜಿ ಡಾ. ರಾಜೀವ್ ಬಹ್ಲ್, ಜೈವಿಕ ತಂತ್ರಜ್ಞಾನ ವಿಭಾಗದ ಕಾರ್ಯದರ್ಶಿ ಡಾ. ರಾಜೇಶ್ ಗೋಖಲೆ, ಮತ್ತು ಕೇಂದ್ರ ಆರೋಗ್ಯ ಸಚಿವಾಲಯದ ಡಿಜಿಎಚ್‌ಎಸ್‌ ಡಾ. ಅತುಲ್ ಗೋಯೆಲ್ ಅವರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!