spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, September 19, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಸೆಪ್ಟೆಂಬರ್- ಅಕ್ಟೋಬರ್ ಅವಧಿಯಲ್ಲಿ ಕೊರೋನಾ ಮೂರನೇ ಅಲೆ ಹೆಚ್ಚಾಗುವ ಸಾಧ್ಯತೆ: ಕಾನ್ಫುರ ಐಐಟಿ!

- Advertisement -Nitte

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………………………………

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಸೆಪ್ಟೆಂಬರ್- ಅಕ್ಟೋಬರ್ ಅವಧಿಯಲ್ಲಿ ಕೊರೋನಾ ಮೂರನೇ ಅಲೆ ಉತ್ತುಂಗಕ್ಕೇರುವ ಸಾಧ್ಯತೆಯಿದೆ ಎಂದು ಕಾನ್ಫುರ ಐಐಟಿಯ ಅಧ್ಯಯನದಲ್ಲಿ ತಿಳಿದುಬಂದಿದೆ.
ಐಐಟಿಯ ಪ್ರೊಫೆಸರ್ ರಾಜೇಶ್ ರಂಜನ್, ಮಹೇಂದ್ರ ವರ್ಮಾ ಮತ್ತಿತರನ್ನೊಳಗೊಂಡ ತಂಡವು , ಎಸ್‌ಐಆರ್ ಮಾದರಿ ಬಳಸಿಕೊಂಡು, ಎರಡನೇ ತರಂಗದ ಸಾಂಕ್ರಾಮಿಕ ನಿಯತಾಂಕಗಳನ್ನು ಬಳಸಿಕೊಂಡು ಸಂಭವನೀಯ ಮೂರನೇ ತರಂಗದ ಕೆಳಗಿನ ಮೂರು ಸನ್ನಿವೇಶಗಳನ್ನು ನಿರ್ಮಿಸಿದ್ದಾರೆ.
ಜುಲೈ 15 ರ ಹೊತ್ತಿಗೆ ದೇಶದಲ್ಲಿ ಸಂಪೂರ್ಣ ಅನ್ ಲಾಕ್ ಅಂತಾ ಭಾವಿಸಿದರೆ ಸನ್ನಿವೇಶ 1 ( ಸಂಪೂರ್ಣ ಸಹಜ ಪರಿಸ್ಥಿತಿ) ಮೂರನೇ ಅಲೆ ಅಕ್ಟೋಬರ್ ನಲ್ಲಿ ಗರಿಷ್ಠ ಹಂತ ತಲುಪಲಿದೆ. ಆದರೆ, ಎರಡನೇ ಅಲೆಗಿಂತ ಸ್ವಲ್ಪ ಕಡಿಮೆ ಪ್ರಮಾಣದಲ್ಲಿರುತ್ತದೆ.
ಸನ್ನಿವೇಶ 2 (ವೈರಸ್ ರೂಪಾಂತರಗಳೊಂದಿಗೆ ಸಾಮಾನ್ಯ ಪರಿಸ್ಥಿತಿ) ಎರಡನೆಯದಕ್ಕಿಂತ ಹೆಚ್ಚಿರಬಹುದು ಮತ್ತು ಸೆಪ್ಟೆಂಬರ್ ಆರಂಭದಲ್ಲಿ ಕಾಣಿಸಿಕೊಳ್ಳಬಹುದು.
ಸನ್ನಿವೇಶ 3( ಕಠಿಣ ಮಧ್ಯಸ್ಥಿಕೆಗಳು) ಕಠಿಣ ಸಾಮಾಜಿಕ ಅಂತರ ಪಾಲನೆಯೊಂದಿಗೆ ಅಕ್ಟೋಬರ್ ಅಂತ್ಯದವರೆಗೂ ಮೂರನೇ ಅಲೆ ಉತ್ತುಂಗ ವಿಳಂಬವಾಗುವ ಸಾಧ್ಯತೆಯಿದೆ. ಮೂರನೇ ಅಲೆ ಉತ್ತುಂಗತ್ತೆ ಎರಡನೇ ಅಲೆಗಿಂತ ಕಡಿಮೆಯಾಗಿರುತ್ತದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಹೇಳಲಾಗಿದೆ.
ಐಐಟಿ ಕಾನ್ಪುರ್ ತಂಡದ ಪ್ರಕಾರ, ಕೆಲವು ಈಶಾನ್ಯ ರಾಜ್ಯಗಳನ್ನು ಹೊರತುಪಡಿಸಿದಂತೆ ಎರಡನೇ ಅಲೆಯೂ ಪ್ರತಿಯೊಂದು ರಾಜ್ಯದಲ್ಲೂ ಗಮನಾರ್ಹವಾಗಿ ಕ್ಷೀಣಿಸಿದೆ.
ದೇಶದಲ್ಲಿ ಸರಾಸರಿ ದೈನಂದಿನ ಪ್ರಕರಣಗಳಲ್ಲಿ ಗಮನಾರ್ಹ ರೀತಿಯಲ್ಲಿ ಕಡಿಮೆಯಾಗಿದೆ. ಬಹುತೇಕ ರಾಜ್ಯಗಳಲ್ಲಿ ಪಾಸಿಟಿವಿಟಿ ದರ ಶೇಕಡಾ 5ಕ್ಕಿಂತ ಕಡಿಮೆಯಿದೆ. ಆದರೆ, ಕೇರಳ, ಗೋವಾ, ಸಿಕ್ಕಿಂ ಮತ್ತು ಮೇಘಾಲಯದಲ್ಲಿ ಪಾಸಿಟಿವಿಟಿ ದರ ಶೇ. 10 ರಷ್ಟಿದೆ. ಈ ವಾರದ ಅಂತ್ಯದ ವೇಳೆಗೆ, ಐಐಟಿ ಕಾನ್ಪುರದ ಮೂರನೇ ತರಂಗದ ಕುರಿತು ಮತ್ತೊಂದು ಅಧ್ಯಯನ ಹೊರಬರುವ ಸಾಧ್ಯತೆಯಿದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss