ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸ ದಿಗಂತ ವರದಿ, ಮಂಡ್ಯ :
ಕೊರೋನಾ ಲಸಿಕೆಗೆ ತೀವ್ರ ಕೊರತೆ ಎದುರಾಗಿರುವ ಹಿನ್ನೆಲೆಯಲ್ಲಿ ಮೊದಲನೇ ಡೋಸ್ ನೀಡುವುದನ್ನು ಸ್ಥಗಿತಗೊಳಿಸಿ ಎರಡನೇ ಡೋಸ್ ಪಡೆಯುವವರಿಗೆ ಮೊದಲ ಆದ್ಯತೆ ನೀಡುವುದಕ್ಕೆ ಆರೋಗ್ಯ ಇಲಾಖೆ ನಿರ್ಧರಿಸಿದೆ.
ಲಸಿಕೆ ಪಡೆಯುವುದಕ್ಕೆ ಮೊದ ಮೊದಲು ಹಿಂದೇಟು ಹಾಕುತ್ತಿದ್ದ ಜನರು ರೂಪಾಂತರಿ ಕೊರೋನಾ ಅಲೆಯ ಗಂಭೀರತೆಯನ್ನು ಅರಿತು ಲಸಿಕೆ ಹಾಕಿಸಿಕೊಂಡು ಜೀವ ಉಳಿಸಿಕೊಳ್ಳುವುದಕ್ಕೆ ಮುಗಿಬಿದ್ದಿದ್ದಾರೆ. ಇದೇ ಸಮಯದಲ್ಲಿ ಎಲ್ಲೆಡೆ ಲಸಿಕೆಗೆ ಕೊರತೆ ಸೃಷ್ಟಿಯಾಗಿದೆ. ಬೇಡಿಕೆಯಷ್ಟು ಲಸಿಕೆ ಪೂರೈಕೆಯಾಗದಿರುವುದರಿಂದ ಪರಿಸ್ಥಿತಿಯನ್ನು ನಿಭಾಯಿಸುವುದು ಆರೋಗ್ಯ ಇಲಾಖೆಗೆ ಕಷ್ಟವಾಗಿದೆ.
30 ರಿಂದ 45 ಜನರಿಗೆ ಲಸಿಕೆ
ಮಿಮ್ಸ್, ತಾಲೂಕು ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ಆಯುಷ್ ಆಸ್ಪತ್ರೆಗಳಲ್ಲಿ ಲಸಿಕೆ ಹಾಕಲಾಗುತ್ತಿದೆ. ಮಿಮ್ಸ್ನಲ್ಲಿ ಮಾತ್ರ ಶೇ.70ರಷ್ಟು ಎರಡನೇ ಡೋಸ್ ಪಡೆಯುವವರಿಗೆ ಶೇ.30ರಷ್ಟು ಲಸಿಕೆಯನ್ನು ಮೊದಲ ಡೋಸ್ ಪಡೆಯುವವರಿಗೆ ಕೊಡಲಾಗುತ್ತಿದೆ.