Wednesday, August 17, 2022

Latest Posts

ಸಸ್ಯಗಳಿಂದ ತಯಾರಾಗಿದೆ ಕೊರೋನಾ ಲಸಿಕೆ: ಫ್ರಿಡ್ಜ್‌ನಲ್ಲಿ ಸಂಗ್ರಹಿಸುವ ಅವಶ್ಯ ಇಲ್ಲ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಸಸ್ಯಗಳಲ್ಲಿ ಕಂಡುಬರುವ ವೈರಾಣು ಹಾಗೂ ಬ್ಯಾಕ್ಟೀರಿಯಾಗಳನ್ನು ಬಳಸಿ ಕೊರೋನಾ ಲಸಿಕೆ ಕಂಡುಹಿಡಿಯಲಾಗುತ್ತಿದೆ.
ಹೌದು, ಅಮೆರಿಕದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಲಸಿಕೆ ಅಭಿವೃದ್ಧಿಪಡಿಸಿದ್ದಾರೆ. ಇದಿನ್ನೂ ಪ್ರಾಯೋಗಿಕ ಹಂತದಲ್ಲಿದೆ. ಇವುಗಳ ಶಕ್ತಿ ಸಾಬೀತಾದರೆ ಜಗತ್ತಿನ ಲಸಿಕೆ ಸಂಶೋಧನ ಕ್ಷೇತ್ರದಲ್ಲೇ ಹೊಸ ಮೈಲಿಗಲ್ಲು ಸೃಷ್ಟಿಯಾಗುತ್ತದೆ.
ಒಟ್ಟಾರೆ ಎರಡು ಲಸಿಕೆಗಳನ್ನು ತಯಾರಿಸಿದ್ದು, ಒಂದು ಸಸ್ಯಗಳಲ್ಲಿರುವ ಕೌಪಿಯಾ ಮೊಸಾಯಿಕ್ ಎಂಬ ವೈರಾಣುವಿನಿಂದ ತಯಾರಿಸಲಾಗಿದೆ. ಇನ್ನೊಂದನ್ನು ಕ್ಯುಬೆಟಾ ಎಂಬ ಬ್ಯಾಕ್ಟೀರಿಯಾದಿಂದ ಉತ್ಪಾದಿಸಲಾಗಿದೆ.
ಈ ಲಸಿಕೆಗಳ ಮತ್ತೊಂದು ವಿಶೇಷತೆಯೆಂದರೆ ಇವುಗಳನ್ನು ಕೋಲ್ಡ್ ಸ್ಟೋರೇಜ್‌ನಲ್ಲಿ ಇಡಬೇಕಿಲ್ಲ. ಫ್ರಿಡ್ಜ್‌ನಲ್ಲಿ ಸಂಗ್ರಹಿಸುವ ಅವಶ್ಯ ಇಲ್ಲ.
ಈ ಲಸಿಕೆಗಳನ್ನು ಈಗಾಗಲೇ ಇಲಿಗಳ ಮೇಲೆ ಪ್ರಯೋಗಿಸಲಾಗಿದೆ. ಇಲಿಗಳು ಸೋಂಕನ್ನು ತಡೆಗಟ್ಟುವ ಶಕ್ತಿ ಪಡೆದಿವೆ.
ನ್ಯಾನೋ ಕಣಗಳ ರೂಪದಲ್ಲಿ ಇರುವ ಈ ವ್ಯಾರಾಣುಗಳನ್ನು ಪ್ರತ್ಯೇಕ ಮಾಡಿ, ಅವುಗಳನ್ನು ಕೊರೋನಾ ವೈರಾಣುವಿನ ಮೇಲಿನ ಮೂಳೆಯಂಥ ಪ್ರೋಟೀನ್‌ಗೆ ಸೇರಿಸಲಾಗುತ್ತದೆ. ತದನಂತರ ಇದು ಬೇಗನೆ ಬೆಳೆದು ಅಪಾರ ಸಂಖ್ಯೆಯಾಗಿ ಪರಿವರ್ತನೆ ಹೊಂದುತ್ತವೆ ಎಂದು ಸಂಶೋಧನೆಯ ನೇತೃತ್ವ ವಹಿಸಿರುವ ಪ್ರೊಫೆಸರ್ ನಿಕೋಲ್ ಸ್ಟೇನ್‌ಮೆಟ್ಸ್ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!