Tuesday, July 5, 2022

Latest Posts

ಬಾಲಿವುಡ್​ ನಟಿ ಶಿಲ್ಪ ಶೆಟ್ಟಿ ಕುಟುಂಬಕ್ಕೂ ಆತಂಕ ಮೂಡಿಸಿದ ಕೊರೋನಾ!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………………………………………………

ಹೊಸದಿಗಂತ ಆನ್ ಲೈನ್ ಡೆಸ್ಕ್:

ಬಾಲಿವುಡ್​ ನಟಿ ಶಿಲ್ಪ ಶೆಟ್ಟಿ ಸಹಿತ ಅವರ ಕುಟುಂಬದ ಎಲ್ಲಾ ಸದಸ್ಯರಿಗೂ ಕೊರೋನಾ ಸೋಂಕು ತಗುಲಿದೆ. ಈ ಬಗ್ಗೆ ಶೆಟ್ಟಿ ಅವರು ತಮ್ಮ ಇನ್​​ಸ್ಟಾಗ್ರಾಂ ಪೋಸ್ಟ್​ನಲ್ಲಿ ತಿಳಿಸಿದ್ದು, ಕಳೆದ 10 ದಿನಗಳು ತುಂಬಾ ಕಷ್ಟಕರವಾಗಿದ್ದವು ಎಂದು ಬರೆದಿದ್ದಾರೆ.
ಮೊದಲು ನನ್ನ ಅತ್ತೆ-ಮಾವನಿಗೆ ಪಾಸಿಟಿವ್ ​ ಬಂತು. ನಂತರ ಒಂದು ವರ್ಷದ ಮಗಳು ಸಮೀಶಾ, ಮಗ ವಿಯಾನ್-ರಾಜ್, ನನ್ನ ತಾಯಿ ಮತ್ತು ಕೊನೆಗೆ ಪತಿ ರಾಜ್ ಕುಂದ್ರ​​ಗೆ ಕೊರೋನಾ ಪಾಸಿಟಿವ್ ದೃಢಪಟ್ಟಿತ್ತು. ನಿಯಮಾನುಸಾರ ಎಲ್ಲರೂ ಅವರವರ ಕೋಣೆಗಳಲ್ಲಿ ಐಸೊಲೇಟ್​ ಆಗಿದ್ದು, ವೈದ್ಯರ ಸಲಹೆಯಂತೆ ನಡೆದುಕೊಳ್ಳುತ್ತಿದ್ದಾರೆ. ದೇವರ ಕೃಪೆಯಿಂದ ಎಲ್ಲರೂ ಚೇತರಿಸಿಕೊಳ್ಳುವ ಹಾದಿಯಲ್ಲಿದ್ದಾರೆ ಎಂದು ಶಿಲ್ಪ ಬರೆದಿದ್ದಾರೆ.
ಮನೆಗೆಲಸದ ಸಿಬ್ಬಂದಿಯಲ್ಲಿ ಇಬ್ಬರಿಗೆ ಕೊರೋನಾ ಪಾಸಿಟಿವ್ ಬಂದಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾಗಿದೆ ಎಂದೂ ಬರೆದಿರುವ ಶೆಟ್ಟಿ, ಇದೀಗ ತಮಗೆ ಪರೀಕ್ಷೆಗಳಲ್ಲಿ ನೆಗಟಿವ್ ವರದಿ ಬಂದಿರುವುದಾಗಿ ಹೇಳಿಕೊಂಡಿದ್ದಾರೆ.
ನಮಗಾಗಿ ಪ್ರಾರ್ಥನೆ ಮಾಡಿ ಎಂದು ತಮ್ಮ ಅಭಿಮಾನಿಗಳನ್ನು ಕೇಳಿರುವ ಶಿಲ್ಪಾ ಶೆಟ್ಟಿ, ‘ಮಾಸ್ಕ್​ ಧರಿಸಿ, ಸ್ಯಾನಿಟೈಸ್ ಮಾಡಿಕೊಳ್ಳಿ, ಸುರಕ್ಷಿತವಾಗಿರಿ’ ಎಂದು ಬರೆದಿದ್ದಾರೆ. ಜೊತೆಗೆ, ‘ಕೋವಿಡ್​ ಪಾಸಿಟಿವ್ ಆಗಿರಲಿ ಬಿಡಲಿ, ಮಾನಸಿಕವಾಗಿ ಮಾತ್ರ ಪಾಸಿಟಿವ್ ಆಗಿರಿ’ ಎಂದು ಸಲಹೆ ನೀಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss