Sunday, April 18, 2021

Latest Posts

ಬೆಂಗಳೂರಿನಲ್ಲಿ ಕೊರೋನಾ ಹೆಚ್ಚಳ: ಮನೆ‌ ಮನೆಗೆ ತೆರಳಿ ಸರ್ವೇ ಕಾರ್ಯಕ್ಕೆ ಮುಂದಾದ ಬಿಬಿಎಂಪಿ!

ಹೊಸದಿಗಂತ ಆನ್ ಲೈನ್ ಡೆಸ್ಕ್:

ಬೆಂಗಳೂರಿನಲ್ಲಿ ಕೊರೋನಾ ಸೋಂಕಿನ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆ ಬಿಬಿಎಂಪಿ ವ್ಯ‍ಾಪ್ತಿಯಲ್ಲಿ ಬೂತ್ ಹಂತದಲ್ಲಿ ತಂಡಗಳನ್ನು ರಚಿಸಿ ಮನೆ ಮನೆಗೆ ತೆರಳಿ ಪ್ರತಿಯೊಬ್ಬರನ್ನೂ ಮಾನಿಟರಿಂಗ್ ಮಾಡಲಿದ್ದೇವೆ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ.
ವಿಕಾಸೌಧದಲ್ಲಿ ಬಿಬಿಎಂಪಿ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಬೆಂಗಳೂರಲ್ಲಿ 8,500 ಬೂತ್ ಹಂತದಲ್ಲಿ ತಂಡಗಳನ್ನು ರಚಿಸಲಾಗುವುದು. ಈ ತಂಡದ ಸದಸ್ಯರು ಮನೆ ಮನೆಗೆ ತೆರಳಿ ಪ್ರತಿಯೊಬ್ಬರನ್ನು ಮಾನಿಟರಿಂಗ್ ಮಾಡಲಿದ್ದಾರೆ. ಬಳಿಕ ರೋಗಿಯ ಪ್ಯಾರಾಮೀಟರ್ ಚೆಕ್ ಮಾಡಲಿದ್ದಾರೆ ಎಂದರು.
ಪ್ರತಿಯೊಂದು ವಾರ್ಡ್​ಗೂ ಆ್ಯಂಬುಲೆನ್ಸ್ ನಿಯೋಜನೆಯಾಗಲಿದೆ. ಬೆಂಗಳೂರಿನಲ್ಲಿ ಪ್ರತಿದಿನ 5 ಸಾವಿರ ಪಾಸಿಟಿವ್ ಕೇಸ್​ಗಳು ಬರುತ್ತಿವೆ. ಹೀಗಾಗಿ 1 ಲಕ್ಷ ಮಂದಿಗೆ ಪ್ರತಿದಿನ ಟೆಸ್ಟ್ ಮಾಡಲು ತಿಳಿಸಿದ್ದೇವೆ. ಜನಸಂದಣಿ ಇರುವ ಪಬ್, ಪಾರ್ಟಿಹಾಲ್, ಮಾಲ್, ಮಾರ್ಕೆಟ್​ಗಳಲ್ಲಿ ತಪಾಸಣೆ ಮಾಡುವುದು ಎಂದು ಸಚಿವರು ಮಾಹಿತಿ ನೀಡಿದರು.
ಬಿಬಿಎಂಪಿ ಅಧಿಕಾರಿಗಳು ಟೆಸ್ಟ್ ಮಾಡಿಸಲು ಬಂದಾಗ ಬೆಂಗಳೂರು ಜನತೆ ಸಹಕರಿಸಬೇಕು. ಫೀವರ್ ಕ್ಲಿನಿಕ್​ಗಳು ಕೆಲಸ ಮಾಡುತ್ತಿದ್ದು, ಅಲ್ಲಿ ವ್ಯಾಕ್ಸಿನ್ ನೀಡುತ್ತಿದ್ದೇವೆ. ಸಾರಿ ಮತ್ತು ಐಎಲ್​ಐ ಕೇಸ್​ಗಳ ಬಗ್ಗೆ ಖಾಸಗಿ ಆಸ್ಪತ್ರೆಗಳು ಕೂಡ ಮಾಹಿತಿ ಕೊಡಲು ತಿಳಿಸಿದ್ದೇವೆ. ಖಾಸಗಿ ವೈದ್ಯಕೀಯ ಕಾಲೇಜುಗಳ ಜೊತೆ ಮಧ್ಯಾಹ್ನ ಸಭೆ ನಡೆಸಿ, ಕೋವಿಡ್​ಗೆ 50% ಮೀಸಲಿಡಲು ತಿಳಿಸುತ್ತೇವೆ. ಸರ್ಕಾರದಿಂದ ಬರುವ ರೋಗಿಗಳಿಗೆ ಎಷ್ಟು ಮೀಸಲಿಡಬೇಕು?. ವೈಯಕ್ತಿಕವಾಗಿ ನೇರವಾಗಿ ಆಸ್ಪತ್ರೆಗೆ ಬರುವವರಿಗೆ ಎಷ್ಟು ಬೆಡ್ ನೀಡಬೇಕು ಅನ್ನೋದನ್ನ ಫಿಕ್ಸ್ ಮಾಡಬೇಕಿದೆ ಎಂದರು.
ಮಾರ್ಷಲ್​ಗಳ ಸಂಖ್ಯೆ ಕಡಿಮೆಯಾಗಿದ್ದು, ಎರಡು ಸಾವಿರ ಹೋಂ ಗಾರ್ಡ್ಸ್​ಗಳನ್ನು ಬಿಬಿಎಂಪಿಗೆ ನೀಡುವಂತೆ ಮನವಿ ಮಾಡಿದ್ದಾರೆ. ಈ ಬಗ್ಗೆ ಸಿಎಂ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಸಚಿವ ಸುಧಾಕರ್​ ತಿಳಿಸಿದರು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss