Thursday, August 11, 2022

Latest Posts

ಮಹಾರಾಷ್ಟ್ರದಲ್ಲಿ ಕೊರೋನಾ ಹೆಚ್ಚಳ: ಜಲಗಾಂವ್ ಜಿಲ್ಲೆಯಲ್ಲಿ ‘ಜನತಾ ಕರ್ಫ್ಯೂ’ ಜಾರಿ!

ಹೊಸದಿಗಂತ ಆನ್ ಲೈನ್ ಡೆಸ್ಕ್:

ಮಹಾರಾಷ್ಟ್ರದಲ್ಲಿ ಕೊರೋನಾ ಸೋಂಕಿನ ಪ್ರಮಾಣ ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಂಬೈ ನ ಜಲ್ಗಾಂವ್ ಪ್ರದೇಶದ ಮುನ್ಸಿಪಲ್ ವ್ಯಾಪ್ತಿಯಲ್ಲಿ ಮಾರ್ಚ್ 11ರಿಂದ 15ರವರೆಗೆ ‘ಜನತಾ ಕರ್ಫ್ಯೂ’ ಜಾರಿಯಾಗಲಿದ್ದು, ರಾತ್ರಿ 8 ಗಂಟೆಯಿಂದ ಸೋಮವಾರ ಬೆಳಗ್ಗೆ 8 ಗಂಟೆಯವರೆಗೆ ‘ಜನತಾ ಕರ್ಫ್ಯೂ’ ಜಾರಿಯಲ್ಲಿರಲಿದೆ ಎಂದು ಸರ್ಕಾರ ತಿಳಿಸಿದೆ.
ಈ ಬಗ್ಗೆ ಮಾತನಾಡಿದ ಜಲಗಾಂವ್ ಜಿಲ್ಲಾಧಿಕಾರಿ ಅಭಿಜಿತ್ ರಾವತ್ , ಆಡಳಿತವು ತುರ್ತು ಸೇವೆಗಳಿಗೆ ಅನುಮತಿ ನೀಡಿದೆ ಮತ್ತು MPSC ಮತ್ತು ಇತರ ಇಲಾಖೆಗಳ ಪರೀಕ್ಷೆಗಳಿಗೆ ವಿನಾಯಿತಿ ನೀಡಿದೆ ಎಂದು ಹೇಳಿದ್ದಾರೆ.
ಥಾಣೆ ಜಿಲ್ಲೆಯ 16 ಹಾಟ್ ಸ್ಪಾಟ್ ಪ್ರದೇಶಗಳನ್ನು ಸೀಲ್‌ ಡೌನ್‌ ಮಾಡಲಾಗಿದೆ. ಈ ನಿರ್ಬಂಧಗಳು ಇಂದಿನಿಂದ ಮಾರ್ಚ್ 31ರವರೆಗೆ ಜಾರಿಗೆ ಬರಲಿವೆ ಎಂದು ನಾಗರಿಕ ಆಡಳಿತ ತನ್ನ ಆದೇಶದಲ್ಲಿ ತಿಳಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss