Saturday, July 2, 2022

Latest Posts

ಕಾಸರಗೋಡು ಜಿಲ್ಲೆಯಲ್ಲಿ ಶನಿವಾರ 79 ಮಂದಿಗೆ ಕೊರೋನಾ ಸೋಂಕು

ಹೊಸದಿಗಂತ ವರದಿ, ಕಾಸರಗೋಡು:

ಜಿಲ್ಲೆಯಲ್ಲಿ ಶನಿವಾರ 79 ಮಂದಿಯಲ್ಲಿ ಹೊಸದಾಗಿ ಕೋವಿಡ್ ವೈರಸ್ ಪತ್ತೆಯಾಗಿದೆ. ಈ ಪೈಕಿ 70 ಜನರಿಗೆ ಸಂಪರ್ಕದ ಮೂಲಕ ಸೋಂಕು ಬಾಧಿಸಿದೆ. ಜಿಲ್ಲೆಯಲ್ಲಿ ಇದೇ ದಿನ 68 ಮಂದಿ ಗುಣಮುಖರಾದರು. ಅಲ್ಲದೆ ಕೊರೋನಾ ಸಂಬಂಧ ಜಿಲ್ಲೆಯಲ್ಲಿ ಹೊಸದಾಗಿ ಮೂವರು ಸಾವಿಗೀಡಾದರು.
ಕೇರಳದಲ್ಲಿ 3795 ಹೊಸ ಪ್ರಕರಣ
ಕೇರಳದಲ್ಲಿ ಶನಿವಾರ ಹೊಸದಾಗಿ 3795 ಜನರಲ್ಲಿ ಕೊರೋನಾ ವೈರಸ್ ದೃಢಗೊಂಡಿದೆ. ಇದರಲ್ಲಿ 3556 ಮಂದಿಗೆ ಸಂಪರ್ಕದಿಂದ ಸೋಂಕು ತಗುಲಿದೆ. ರಾಜ್ಯದಲ್ಲಿ ಒಂದೇ ದಿನ 4308 ಜನರು ಗುಣಮುಖರಾಗಿದ್ದಾರೆ. ಈ ಮಧ್ಯೆ ಕೇರಳದಲ್ಲಿ 50 ಮಂದಿ ಕೋವಿಡ್ ಬಾಧಿಸಿ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಶುಕ್ರವಾರ ಶೇಕಡಾ 7.04 ಟೆಸ್ಟ್ ಪಾಸಿಟಿವಿಟಿ ರೇಟ್ (ಟಿಪಿಆರ್) ದಾಖಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss