ಹೊಸದಿಗಂತ ಆನ್ ಲೈನ್ ಡೆಸ್ಕ್:
ದೇಶದಲ್ಲಿ ಮತ್ತೆ ಕೊರೋನಾ ಎರಡನೇ ಅಲೆಯ ಅಬ್ಬರ ಜೋರಾಗಿದ್ದು, ಈ ಹಿನ್ನೆಲೆ ಕಾರ್ಪೊರೇಟ್ ಕಂಪನಿಗಳು ಕಚೇರಿ ಆರಂಭಿಸುವ ಯೋಜನೆಯನ್ನು ಮುಂದೂಡಲಿವೆ ಎಂದು ತಜ್ಞರು ಹೇಳಿದ್ದಾರೆ.
ಏಪ್ರಿಲ್ ತಿಂಗಳಿನಿಂದ ಹಲವು ಕಂಪನಿಗಳು ವರ್ಕ್ ಫ್ರಮ್ ಹೋಮ್ ಸ್ಥಗಿತಗೊಳಿಸಿ, ಕಚೇರಿ ಆರಂಭಿಸುವ ಸಿದ್ಧತೆಯಲ್ಲಿದ್ದವು. ಆದರೆ ಕೋವಿಡ್ ಎರಡನೇ ಅಲೆ ಈ ಯೋಚನೆಯನ್ನು ತಲೆಕೆಳಗಾಗಿಸಿದೆ.
ಕೊರೋನಾ ಸೋಂಕಿನಿಂದಾಗಿ ಮತ್ತಷ್ಟು ಮುಂಜಾಗ್ರತಾ ಕ್ರಮಗಳನ್ನು ಕಂಪನಿಗಳು ತೆಗೆದುಕೊಳ್ಳಬೇಕಿದ್ದು, ಈಗ ನೀಡಿರುವ ವರ್ಕ್ ಫ್ರಮ್ ಹೋಮ್ ಸೌಲಭ್ಯವನ್ನು ಮುಂದುವರಿಸಬೇಕಿದೆ ಎಂದು ಉದ್ಯಮ ಮತ್ತು ಕಾರ್ಪೊರೇಟ್ ವಲಯದ ತಜ್ಞರು ತಿಳಿಸಿದ್ದಾರೆ.
ಇನ್ನು ಪ್ರಸ್ತುತ ಪರಿಸ್ಥಿತಿಯಲ್ಲಿಉದ್ಯೋಗಿಗಳನ್ನು ಕಚೇರಿಗೆ ಕರೆಸಿಕೊಳ್ಳುವುದು ಸಾಧ್ಯವಿಲ್ಲ, ಅಲ್ಲದೆ, ಇನ್ನೂ ಮುಂದಿನ 2-3 ತಿಂಗಳವರೆಗೆ ಮನೆಯಿಂದಲೇ ಉದ್ಯೋಗಿಗಳು ಕೆಲಸ ನಿರ್ವಹಿಸುವುದು ಸೂಕ್ತ, ಅದು ಸುರಕ್ಷತೆಯೂ ಹೌದು ಎಂಬ ಅಭಿಪ್ರಾಯವನ್ನು ಉದ್ಯಮದ ಮುಖ್ಯಸ್ಥರು ಕೂಡ ಹೊಂದಿದ್ದಾರೆ.