ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, August 2, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ವಿಶ್ವದಲ್ಲಿ ಕೊರೋನಾ ಎರಡನೇ ಅಲೆಯ ಅಬ್ಬರ: ಪರಿಸ್ಥಿತಿ ಚಿಂತಾಜನಕವಾಗಿದೆ ಎಂದ WHO

ಹೊಸದಿಗಂತ ಆನ್ ಲೈನ್ ಡೆಸ್ಕ್:

ವಿಶ್ವದಲ್ಲಿ ಕೊರೋನಾ ಎರಡನೇ ಅಲೆಯ ಅಬ್ಬರ ಜೋರಾಗುತ್ತಿದ್ದು, ದಿನೇ ದಿನೇ ಪ್ರಕರಣಗಳ ಸಂಖ್ಯೆ ದ್ವಿಗುಣಗೊಳ್ಳುತ್ತಿದ್ದು, ಕೋವಿಡ್ ಹರಡಲು ಪ್ರಾರಂಭವಾದ ಬಳಿಕ ಇದುವರೆಗೂ ಇಷ್ಟು ಪ್ರಕರಣಗಳು ವರದಿಯಾಗಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಹೆಚ್‌ಒ) ತಿಳಿಸಿದೆ.
ಪ್ರಸ್ತುತ ಹೊಸ ಪ್ರಕರಣಗಳು ಮತ್ತು ಸಾವಿನ ಸಂಖ್ಯೆ ಹೆಚ್ಚುತ್ತಲೇ ಇದ್ದು, ಪರಿಸ್ಥಿತಿ ಚಿಂತಾಜನಕವಾಗಿದೆ. ಈ ಹಿಂದೆ ವ್ಯಾಪಕವಾಗಿ ಸೋಂಕು ಹರಡುವಿಕೆಯನ್ನು ತಡೆಗಟ್ಟಿದ್ದ ಕೆಲ ದೇಶಗಳಲ್ಲೂ ಕೂಡ ಈ ಬಾರಿ ಸೋಂಕು ಹೆಚ್ಚಾಗಿದೆ ಎಂದು ಡಬ್ಲ್ಯುಎಚ್‌ಒ ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ವಿಶೇಷ ಸಭೆಯಲ್ಲಿ ತಿಳಿಸಿದ್ದಾರೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ವೇಗವಾಗಿ ಹರಡುತ್ತಿರುವ ಸೋಂಕು, ಕೋವಿಡ್ ಮುಂಜಾಗ್ರತ ಕ್ರಮಗಳ ಸಡಿಲಗೊಳಿಸುವಿಕೆ ಮತ್ತು ಲಸಿಕೆ ಹಂಚಿಕೆಯಲ್ಲಿನ ತಾರತಮ್ಯ ಸೋಂಕು ಹೆಚ್ಚಲು ಕಾರಣವಾಗಿದೆ. ಇದು ಆತಂಕಕಾರಿ ಬೆಳವಣಿಗೆಯಾಗಿದೆ.
ಲಸಿಕೆ ವಿತರಣೆಯಲ್ಲಿ ಅಸಮಾನತೆ ನಮ್ಮ ಮುಂದಿರುವ ಸವಾಲು ಅದನ್ನು ನಿರ್ವಹಿಸುವಲ್ಲಿ ವಿಫಲವಾಗುತ್ತಿದ್ದೇವೆ. ಡಬ್ಲ್ಯುಹೆಚ್‌ಒ ಅಂಕಿ ಅಂಶಗಳು ಜಾಗತಿಕವಾಗಿ 832 ದಶ ಲಕ್ಷ ಡೋಸ್​ ಕೋವಿಡ್ ಲಸಿಕೆ ಅತಿದೊಡ್ದ, ದೊಡ್ಡ ಮತ್ತು ಮಧ್ಯಮ ಆರ್ಥಿಕತೆಯ ದೇಶಗಳಿಗೆ ಹೋಗಿವೆ. ಕಡಿಮೆ ಆದಾಯದ ದೇಶಗಳಿಗೆ ಶೇ.0.2 ರಷ್ಟು ಮಾತ್ರ ಲಸಿಕೆ ಹಂಚಿಕೆಯಾಗಿವೆ.
ಈ ಅಸಮಾನತೆ ಕೇವಲ ಲಸಿಕೆ ಹಂಚಿಕೆ ಮಾತ್ರವಲ್ಲದೆ ಆರ್ಥಿಕ ಮತ್ತು ರೋಗ ನಿರ್ವಹಣೆಯ ಮೇಲೆಯೂ ಪರಿಣಾಮ ಬೀರಲಿದೆ ಎಂದು ಘೆಬ್ರೆಯೆಸಸ್ ಅಭಿಪ್ರಾಯಪಟ್ಟಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss