ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………
ಹೊಸದಿಗಂತ ವರದಿ, ರಾಮನಗರ:
ರಾಮನಗರ ಜಿಲ್ಲೆಯಲ್ಲಿ ಇಂದು ೪೯೦ ಜನರಿಗೆ ಕೊರೋನಾ ಸೋಂಕು ದೃಢವಾಗಿದ್ದು, ಇವರನ್ನು ರಾಮನಗರ ಜಿಲ್ಲೆಯ ವ್ಯಾಪ್ತಿಗೆ ಒಳಪಡುವ ವಿವಿಧ ಕೋವಿಡ್-೧೯ ಆಸ್ಪತ್ರೆಗಳಿಗೆ ದಾಖಲಿಸಿದೆ.
ರಾಮನಗರ ತಾಲ್ಲೂಕು-೧೩೧, ಚನ್ನಪಟ್ಟಣ ತಾಲ್ಲೂಕು-೬೮ ಕನಕಪುರ ತಾಲ್ಲೂಕು-೨೨೩, ಮಾಗಡಿ ತಾಲ್ಲೂಕು-೬೮ ಜನರಿಗೆ ಸೋಂಕು ಕಾಣಿಸಿಕೊಂಡಿದ್ದು, ಒಟ್ಟು ಸಕ್ರಿಯೆ ಪ್ರಕರಣಗಳ ಸಂಖ್ಯೆ ೨೪೬೭ ಕ್ಕೇರಿದೆ, ಜಿಲ್ಲೆಯಲ್ಲಿ ಈವರೆಗೆ ಒಟ್ಟು ೧೨೫೧೫ ಜನರಿಗೆ ಕೋವಿಡ್ ಪಾಸಿಟಿವ್ ಕಂಡುಬAದಿದ್ದು, ೯೯೧೮ ಜನರು ಗುಣಮುಖರಾಗಿರುತ್ತಾರೆ.
ಇಂದು ರಾಮನಗರ ತಾಲ್ಲೂಕಿನಲ್ಲಿ-೭೭, ಚನ್ನಪಟ್ಟಣ ತಾಲ್ಲೂಕಿನಲ್ಲಿ-೫೭, ಮಾಗಡಿ ತಾಲ್ಲೂಕಿನಲ್ಲಿ-೮೪ ಹಾಗೂ ಕನಕಪುರ ತಾಲ್ಲೂಕಿನಲ್ಲಿ-೮೪ ಜನರು ಗುಣಮುಖರಾಗಿದ್ದಾರೆ.
ಇಂದು ಮಾಗಡಿ ತಾಲ್ಲೂಕಿನಲ್ಲಿ-೦೧, ಹಾಗೂ ಕನಕಪುರ ತಾಲ್ಲೂಕಿನಲ್ಲಿ-೦೩ ಜನರು ಮರಣ ಹೊಂದಿದ್ದು, ಮರಣ ಪ್ರಕರಣಗಳ ಸಂಖ್ಯೆ ೧೩೦ ಕ್ಕೇರಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳು ತಿಳಿಸಿದರು