ಇಂದು ಲಂಡನ್‌ನಲ್ಲಿ ಕಿಂಗ್ ಚಾರ್ಲ್ಸ್ III ಪಟ್ಟಾಭಿಷೇಕ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂದು ಲಂಡನ್‌ನಲ್ಲಿ ಕಿಂಗ್ ಚಾರ್ಲ್ಸ್‌ IIIರ ಪಟ್ಟಾಭಿಷೇಕ ನಡೆಯಲಿದೆ.

ಭಾರತದ ಉಪರಾಷ್ಟ್ರಪತಿಗಳಾದ ಜಗದೀಪ್ ಧಂಕರ್ ಹಾಗೂ ಅವರ ಪತ್ನಿ ಸುದೇಶ್ ಧಂಕರ್ ಅವರಿಗೆ ಸಮಾರಂಭಕ್ಕೆ ಆಹ್ವಾನ ನಿಡಲಾಗಿದೆ. ಇನ್ನು ಬಾಲಿವುಡ್ ನಟಿ ಸೋನಂ ಕಪೂರ್ ಕಾರ್ಯಕ್ರಮದ ನಿರೂಪಣೆ ಮಾಡುತ್ತಾರೆ ಎನ್ನಲಾಗಿದೆ.

ಮುಂಬೈನ ಇಬ್ಬರು ಡಬ್ಬಾವಾಲಾಗಳನ್ನೂ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಕಿಂಗ್ ಚಾರ್ಲ್ಸ್ ಈ ಹಿಂದೆ ಭಾರತಕ್ಕೆ ಬಂದಾಗ ಮುಂಬೈನ ಫೇಮಸ್ ಡಬ್ಬಾವಾಲಾಗಳನ್ನು ಭೇಟಿ ಮಾಡಿದ್ದರು. ಅವರನ್ನು ಸಮಾರಂಭಕ್ಕೆ ಆಹ್ವಾನಿಸಲಾಗಿದೆ.

ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರು ಪಟ್ಟಾಭಿಷೇಕ ಸಮಾರಂಭದಲ್ಲಿ ಬೈಬಲ್‌ನ ಕೊಲೊಸ್ಸಿಯನ್ಸ್ ಪುಸ್ತಕವನ್ನು ಬೋಧನೆ ಮಾಡಲಿದ್ದಾರೆ. ಪತ್ನಿ ಅಕ್ಷತಾ ಮೂರ್ತಿ ಕೂಡ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!