ಹೊಸದಿಗಂತ ವರದಿ, ತುಮಕೂರು:
ತುಮಕೂರು ಜಿಲ್ಲೆಯಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳು ಶರವೇಗದಲ್ಲಿ ಹೆಚ್ಚಳವಾಗುತ್ತಿರುವುದು ಆತಂಕದ ವಿಷಯವಾಗಿದೆ.
ಇಂದು ಒಂದೇ ದಿನ 520 ಪಾಸಿಟಿವ್ ದೃಢಪಟ್ಟಿದ್ದು, ತುಮಕೂರು ಒಂದರಲ್ಲಿಯೇ 217 ಪ್ರಕರಣಗಳು ದಾಖಲಾಗಿವೆ. ಇಂದು 226 ಮಂದಿ ತುಮಕೂರು ತಾಲೂಕಿನ ಸೀತಕಲ್ಲು ಗ್ರಾಮದ 30ವರ್ಷದ ಯುವಕ.ಮಧುಗಿರಿಯ 55ವರ್ಷ ಪುರುಷ.ತುಮಕೂರು ಸೋಮೇಶ್ವರ ಬಡಾವಣೆಯಲ್ಲಿ 76 ವರ್ಷದ ಮಹಿಳೆ ಮೃತರಾಗಿದ್ದು. ಮೃತರ ಸಂಖ್ಯೆ 478 ಆಗಿದೆ.
ಇಂದು 211 ಮಂದಿ ಗುಣಮುಖರಾಗಿದ್ದಾರೆ. ಇದುವರೆಗೆ ಗುಣಮುಖರಾದವರು 26726 ಮತ್ತು 3518 ಸಕ್ರಿಯ. 30722 ಖಚಿತ ಪ್ರಕರಣಗಳು ಇವೆ.
7೦ ಮಂದಿ ವಿಶೇಷ ನಿಗಾವಣೆಯಲ್ಲಿದ್ದಾರೆ.
ಇಂದು ತುಮಕೂರಿನಲ್ಲಿ 217,,ತಿಪಟೂರಿನಲ್ಲಿ 47,ಗುಬ್ಬಿಯಲ್ಲಿ 27,ಚಿ.ನಾ.ಹಳ್ಳಿ ಯಲ್ಲಿ 14,ಕುಣಿಗಲ್ ನಲ್ಲಿ 36,ಮಧುಗಿರಿಯಲ್ಲಿ 28,ಪಾವಗಡದಲ್ಲಿ 45,,ಶಿರಾದಲ್ಲಿ 73,,ಕೊರಟಗೆರೆಯಲ್ಲಿ 17 ತುರುವೇಕೆರೆಯಲ್ಲಿ 16 ಪಾಸಿಟೀವ್ ಪ್ರಕರಣಗಳು ದಾಖಲಾಗಿವೆ ಎಂದು ಡಿ.ಹೆಚ್. ಓ.ಡಾ.ನಾಗೇಂದ್ರಪ್ಪ ತಿಳಿಸಿದ್ದಾರೆ.