Monday, August 8, 2022

Latest Posts

ಚಿಕ್ಕಮಗಳೂರು ಜಿಲ್ಲೆಯಲ್ಲಿ 963 ಮಂದಿಗೆ ಕೊರೋನಾ ಪಾಸಿಟಿವ್

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………………..

ಹೊಸದಿಗಂತ ವರದಿ, ಚಿಕ್ಕಮಗಳೂರು:

ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾನುವಾರ 963 ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, 3 ಮಂದಿ ಸಾವಿಗೀಡಾಗಿ, 628 ಮಂದಿ ಗುಣಮುಖರಾಗಿದ್ದಾರೆ.
ಚಿಕ್ಕಮಗಳೂರು ತಾಲ್ಲೂಕಿನಲ್ಲಿ 265, ಕೂಡೂರು ತಾಲ್ಲೂಕಿನಲ್ಲಿ 163, ತರೀಕೆರೆ 223, ಮೂಡಿಗೆರೆ 106, ಎನ್‍ಆರ್‍ಪುರ 41, ಕೊಪ್ಪ ತಾಲ್ಲೂಕಿನಲ್ಲಿ 84 ಹಾಗೂ ಶೃಂಗೇರಿ ತಾಲ್ಲೂಕಿನಲ್ಲಿ 81 ಮಂದಿಗೆ ಸೋಂಕು ತಗುಲಿದೆ.
ಈ ವರೆಗೆ ಜಿಲ್ಲೆಯಲ್ಲಿ 27589 ಮಂದಿಗೆ ಸೋಂಕು ತಗುಲಿದ್ದು, 20861 ಮಂದಿ ಗುಣಮುಖರಾಗಿದ್ದಾರೆ. 5903 ಸಕ್ರೀಯ ಪ್ರಕರಣಗಳಿವೆ. ಈ ವರೆಗೆ ಒಟ್ಟು 193 ಮಂದಿ ಮೃತಪಟ್ಟಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss