Tuesday, August 16, 2022

Latest Posts

ಲಸಿಕೆಯಿಂದ ಮಾತ್ರ ಕೊರೋನಾ ನಿಯಂತ್ರಣ ಸಾಧ್ಯ: ಸಿಎಂ ಬಸವರಾಜ ಬೊಮ್ಮಾಯಿ

ಹೊಸದಿಗಂತ ವರದಿ,ಹಾವೇರಿ:

ಲಸಿಕೆ ನೀಡುವುದರಿಂದ ಮಾತ್ರ ಕೊರೋನಾ ನಿಯಂತ್ರಣ ಸಾಧ್ಯ. ಲಸಿಕೆ ಕುರಿತು ಜನತೆಯಲ್ಲಿ ಜಾಗೃತಿ ಮೂಡಿಸುವುದು ತಪ್ಪೇ? ಜಾಗೃತಿಗಾಗಿ ಪ್ರಚಾರವನ್ನು ಮಾಡುವುದು ತಪ್ಪಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಜಿಲ್ಲೆಯ ಹಾನಗಲ್ಲ ಪಟ್ಟಣದ ಉದಾಸಿ ಕಲ್ಯಾಣಂಟಪದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೋನಾ ನಿಯಂತ್ರಣಕ್ಕೆ ದೇಶದ ವಿಜ್ಞಾನಿಗಳು ಮತ್ತು ಈ ಸಂದರ್ಭದಲ್ಲಿ ಕೇಂದ್ರ ಕೈಗೊಂಡ ನಿರ್ಧಾರಗಳಿಂದಾಗಿ ಜನತೆಯ ಪ್ರಾಣವನ್ನು ಉಳಿಸಿರುವ ಕುರಿತು ಸಾರ್ವಜನಿಕರಿಗೆ ತಿಳಿಸಬಾರದೆನ್ನುವ ಕಾಂಗ್ರೆಸ್ಸಿನವರ ನಿಲುವು ಎಷ್ಟು ಸರಿಯಾದುದು. ಅವರ ಸಲಹೆಯಂತೆ ನಾವು ನಡೆದುಕೊಳ್ಳಬೇಕೆ ಎಂದರು.
ದೇಶದಲ್ಲಿ ಲಸಿಕೆ ನೀಡುವುದಕ್ಕೂ ಪೂರ್ವದಲ್ಲಿ ಸಾವಿನ ಸಂಖ್ಯೆ ಅಧಿಕವಾಗಿತ್ತು ಲಸಿಕೆ ನೀಡಲಾರಂಭಿಸಿದಾಗಿನಿಂದ ಸಾವಿನ ಸಂಖ್ಯೆ ಪ್ರಮಾಣ ಅತ್ಯಧಿಕವಾಗಿ ಕಡಿಮೆಯಾಗಿದೆ. ಈ ಕುರಿತು ಜನತೆಗೆ ತಿಳಿಸುವುದು ಬೇಡವೇ?. ಕಾಂಗ್ರೆಸ್ಸಿಗರು ಟೀಕಿಸುವಂತೆ ಇದು ಕೊರೋನಾದಿಂದ ನಿಧನರಾದವರ ಸಾವಿನ ಮೇಲೆ ಸಂಭ್ರಮಾಚರಣೆ ಮಾಡುವುದಲ್ಲ ಎಂದು ತಿಳಿಸಿದರು.
ಕೊರೋನಾ ಲಸಿಕೆಯನ್ನು ಕಂಡುಹಿಡಿದ ವಿಜ್ಞಾನಿಗಳು ಮತ್ತು ಕಂಪನಿಗಳಿಗೆ ಪ್ರಧಾನಿ ನರೇಂದ್ರ ಮೋದಿಯವರು ಅಭಿನಂದಿಸಿ ಅವರಿಗೆ ಗೌರವವನ್ನು ಸಲ್ಲಿಸಿದ್ದಾರೆ. ವಿಶ್ವದಲ್ಲಿ ಯಾವುದೇ ರಾಷ್ಟ್ರ ನೂರು ಕೋಟಿ ಜನರಷ್ಟು ದೊಡ್ಡ ಪ್ರಮಾಣದಲ್ಲಿ ಲಸಿಕೆಯನ್ನು ನೀಡಿಲ್ಲ. ಇದು ಕೇಂದ್ರ ಸರ್ಕಾರ ಮಾಡಿದ ಸಾಧನೆ ಇದನ್ನು ಹೆಮ್ಮೆಯಿಂದ ಹೇಳಲುಬಾರದೇ ಎಂದು ಕಾಂಗ್ರೆಸ್ ನಾಯಕರನ್ನು ಪ್ರಶ್ನಿಸಿದರು.
ಜೆ.ಡಿಎಸ್ ಪ್ರಾದೇಶಿಕ ಪಕ್ಷವಾಗಿದ್ದು, ಅವರ ಅಭ್ಯರ್ಥಿಗಳ ಬಗ್ಗೆ ನಾನು ಮಾತನಾಡುವುದಿಲ್ಲ. ಕಾಂಗ್ರೆಸ್ ಪಕ್ಷ ಇನ್ನೊಬ್ಬರ ದೌರ್ಬಲ್ಯ ಮೇಲೆ ಮತ ಪಡೆಯುವ ಕೆಲಸ ಮಾಡುತ್ತಿದೆ. ನಮ್ಮ ಪಕ್ಷದ ಬಲದ ಮೇಲೆ ನಾವು ಮತ ಪಡೆಯಲಿದ್ದೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಸದ ಶಿವಕುಮಾರ ಉದಾಸಿ, ಎನ್.ರವಿಕುಮಾರ, ಬಿಜೆಪಿ ಅಭ್ಯರ್ಥಿ ಶೀವರಾಜ ಸಜ್ಜನರ, ರಾಜ್ಯ ಮಾಧ್ಯಮ ಸಂಯೋಜಕ ಪ್ರಶಾಂತ ಕಡಂಜಿ, ಜಿಲ್ಲಾ ವಕ್ತಾರ ಪ್ರಭು ಹಿಟ್ನಳ್ಳಿ ಇತರರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss