Friday, July 1, 2022

Latest Posts

ಮೆಕ್ಸಿಕೋ, ಆಫ್ರಿಕಾ, ಇಸ್ರೇಲ್ ದೇಶಗಳನ್ನೇ ಹಿಂದಿಕ್ಕಿದ ಇಲ್ಲಿನ ಕೊರೋನಾ ಸೋಂಕಿನ ಪ್ರಮಾಣ!

ಹೊಸದಿಗಂತ ಆನ್ ಲೈನ್ ಡೆಸ್ಕ್:
 
ಯಾವುದೇ ಚುನಾವಣೆ, ಉತ್ಸವಾದಿಗಳ ಭರಾಟೆಯಿಲ್ಲದ ಛತ್ತೀಸ್‌ಗಢದಲ್ಲಿ ಕೊರೋನಾ ಸೋಂಕು ಸೋಟಗೊಂಡಿದ್ದು, ರಾಯ್‌ಪುರ ಜಿಲ್ಲೆ ಯೊಂದೇ ಕೋವಿಡ್ ಸೋಂಕಿತರ ಪಟ್ಟಿಯಲ್ಲಿ ಇರುವ ಬ್ರಿಟನ್, ಯುನೈಟೆಡ್ ಅರಬ್ ಎಮಿರೇಟ್ಸ್ ,ಮೆಕ್ಸಿಕೋ, ದಕ್ಷಿಣ ಆಫ್ರಿಕಾ, ಇಸ್ರೇಲ್ ದೇಶಗಳಲ್ಲಿ ಕಂಡುಬಂದ ಕೋವಿಡ್ ಸೋಂಕಿನ ಸಂಖ್ಯಾ ಪ್ರಮಾಣವನ್ನೇ ಹಿಂದಿಕ್ಕಿ ದಿಗ್ಭ್ರಮೆಗೊಳ್ಳುವಂತೆ ಮಾಡಿದೆ.ಮಾತ್ರವಲ್ಲದೆ , ದಿನವಹಿ ಪ್ರಕರಣಗಳಲ್ಲಿ ದೇಶದಲ್ಲೇ ೩ನೇ ಸ್ಥಾನಕ್ಕೇರಿದೆ.
ಛತ್ತೀಸ್‌ಗಢದ ರಾಜಧಾನಿ ರಾಯ್‌ಪುರದಲ್ಲಿ ಮತ್ತೆ ದೈನಂದಿನ ಸೋಂಕಿತರ ಸಂಖ್ಯೆ ೪ ಸಾವಿರದ ಗಡಿ ದಾಟಿದ್ದು, ಆ ಮೂಲಕ ದೈನಂದಿನ ಸೋಂಕು ವರದಿಯಲ್ಲಿ ಭಾರೀ ಪ್ರಮಾಣದ ಹೆಚ್ಚಳ ಕಂಡುಬಂದಿದೆ.ಮಂಗಳವಾರ ರಾಯಪುರದಲ್ಲಿ ೪,೧೬೮ ಹೊಸ ಸೋಂಕು ಪ್ರಕರಣಗಳು ದಾಖಲಾಗಿದ್ದು, ಸೋಂಕಿನ ಪ್ರಕರಣಗಳ ಹೆಚ್ಚಳ ಇದೇ ರೀತಿ ಮುಂದುವರಿದಿದೆ. ಛತ್ತೀಸ್‌ಗಢದಲ್ಲಿ ದಿನವಹಿ ಇದೀಗ ೧೫೦೦೦ಕ್ಕೂ ಅಕ ಪ್ರಕರಣಗಳು ವರದಿಯಾಗುತ್ತಿದ್ದು, ಇದರೊಂದಿಗೆ ಸಕ್ರಿಯ ಪ್ರಕರಣಗಳ ಸಂಖ್ಯೆ ಮೊದಲ ಬಾರಿಗೆ ಲಕ್ಷದ ಗಡಿ ದಾಟಿದೆ.ಸೋಂಕಿ ಪಾಸಿಟಿವಿಟಿ ಪ್ರಮಾಣ ಶೇ.೨೮.೪ರ ಅಪಾಯಕಾರಿ ಮಟ್ಟದಲ್ಲಿದೆ.
ಕೋವಿಡ್ ಸೋಂಕಿನ ಪ್ರಮಾಣವು ರಾಯ್‌ಪುರದಲ್ಲಿ ಅಪಾಯಕಾರಿ ಪ್ರಮಾಣದಲ್ಲಿ ಹೆಚ್ಚುತ್ತಿರುವುದರಿಂದ, ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿನ ಹಾಸಿಗೆಗಳ ಕೊರತೆ ಉಂಟಾಗಿದೆ. ಅಲ್ಲದೆ, ಐಸಿಯು ಹಾಸಿಗೆಗಳೂ ಕೂಡ ಬಹುತೇಕ ಭರ್ತಿಯಾಗಿದ್ದು ಇದು ಅಕಾರಿಗಳ ಆತಂಕಕ್ಕೆ ಕಾರಣವಾಗಿದೆ. ಆಸ್ಪತ್ರೆಗಳಲ್ಲಿನ ಶವಾಗಾರಗಳು ಭರ್ತಿಯಾಗಿರುವ ಕಾರಣ ಆಸ್ಪತ್ರೆ ಅವರಣದಲ್ಲೇ ಶವಗಳನ್ನು ಶೇಖರಿಸಿಡಲಾಗುತ್ತಿದೆ. ಅತ್ತ ಶವಸಂಸ್ಕಾರಕ್ಕೂ ಕೂಡ ಹಲವಾರು ಗಂಟೆಗಳ ಕಾಲ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕಾಂಗ್ರೆಸ್ ಆಡಳಿತದ ಛತ್ತೀಸ್‌ಗಢದಲ್ಲಿ ಆರಂಭದಿಂದಲೂ ಕೋವಿಡ್ ರಾಜಕೀಯ ಜೋರಾಗಿ ನಡೆದಿದ್ದು, ಮುಖ್ಯಮಂತ್ರಿ ಭೂಪೇಶ್ ಬಾಘೆಲ್ ಕೇಂದ್ರ ಸರಕಾರದ ಜೊತೆ ಸಂಘರ್ಷದ ನಿಲುವು ತಾಳುತ್ತಾ ಬಂದರಲ್ಲದೆ, ಲಸಿಕೆ ವಿಷಯದಲ್ಲೂ ರಾಜಕೀಯ ಮಾಡುತ್ತಲೇ ಬಂದಿದ್ದರು. ಅವರ ಸರಕಾರ ರಾಜ್ಯದಲ್ಲಿ ಆರೋಗ್ಯ ಮೂಲಸೌಕರ್ಯಗಳ ಅಭಿವೃದ್ಧಿಯನ್ನು ನಿರ್ಲಕ್ಷಿಸಿದೆ ಎಂಬ ಗಂಭೀರ ಆರೋಪಗಳೂ ಕೇಳಿಬಂದಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss