ರಾಜ್ಯದಲ್ಲಿ ಇಂದು 28,264 ಮಂದಿಗೆ ಕೊರೋನಾ ಸೋಂಕು, ಪಾಸಿಟಿವಿಟಿ ದರ 16.38%

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದಲ್ಲಿ ಇಂದು ಹೊಸದಾಗಿ 28,264 ಮಂದಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದ್ದು, ಸೋಂಕಿನಿಂದ 68 ಜನರು ಸಾವನ್ನಪ್ಪಿದ್ದಾರೆ.
ಈ ಕುರಿತಂತೆ ಟ್ವಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು, ಬೆಂಗಳೂರಿನಲ್ಲಿ 11,938 ಸೇರಿದಂತೆ ಕರ್ನಾಟಕದಲ್ಲಿ 28,264 ಜನರಿಗೆ ಕೊರೋನಾ ದೃಢಪಟ್ಟಿದೆ. ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇ.16.38ಕ್ಕೆ ಏರಿಕೆಯಾಗಿದೆ.
29,244 ಮಂದಿ ಗುಣಮುಖರಾಗಿದ್ದಾರೆ. 2,51,084 ಮಂದಿ ಸಕ್ರೀಯ ಸೋಂಕಿತರು ಇರುವುದಾಗಿ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!