Saturday, August 13, 2022

Latest Posts

ಕಾಸರಗೋಡು ಜಿಲ್ಲೆಯಲ್ಲಿ ಮಂಗಳವಾರ 80 ಮಂದಿಗೆ ಕೊರೋನಾ ಸೋಂಕು

ಹೊಸ ದಿಗಂತ ವರದಿ, ಕಾಸರಗೋಡು:

ಜಿಲ್ಲೆಯಲ್ಲಿ ಮಂಗಳವಾರ 80 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. ಈ ಪೈಕಿ 72 ಜನರಿಗೆ ಸಂಪರ್ಕದಿಂದ ಸೋಂಕು ಬಾಧಿಸಿದೆ. ಅಲ್ಲದೆ ಜಿಲ್ಲೆಯಲ್ಲಿ 75 ಮಂದಿ ಗುಣಮುಖರಾದರು. ಇದೇ ವೇಳೆ ಕೇರಳದಲ್ಲಿ 2938 ಜನರಿಗೆ ಕೊರೋನಾ ವೈರಸ್ ದೃಢಪಟ್ಟಿದೆ. ಇದರಲ್ಲಿ 2657 ಮಂದಿಗೆ ಸಂಪರ್ಕದ ಮೂಲಕ ಸೋಂಕು ತಗಲಿದೆ. ರಾಜ್ಯದಲ್ಲಿ 3512 ಜನರು ಗುಣಮುಖರಾದರು.
ತೃಶೂರು ಜಿಲ್ಲೆಯಲ್ಲಿ 354, ಮಲಪ್ಪುರಂ 344, ಕಲ್ಲಿಕೋಟೆ 334, ಎರ್ನಾಕುಳಂ 306, ಕೊಲ್ಲಂ 271, ಪತ್ತನಂತ್ತಿಟ್ಟ 238, ಕಣ್ಣೂರು 225, ಕೋಟ್ಟಾಯಂ 217, ತಿರುವನಂತಪುರ 190, ಆಲಪ್ಪುಳ 161, ಪಾಲಕ್ಕಾಡು 99, ಕಾಸರಗೋಡು 80, ಇಡುಕ್ಕಿ 62, ವಯನಾಡು ಜಿಲ್ಲೆಯಲ್ಲಿ 57 ಜನರಿಗೆ ಕೊರೋನಾ ಸೋಂಕು ದೃಢಗೊಂಡಿದೆ. ಈ ಮಧ್ಯೆ ಕೋವಿಡ್ ವೈರಸ್ ಬಾಧಿಸಿ ಕೇರಳದಲ್ಲಿ ಮಂಗಳವಾರ 16 ಮಂದಿ ಸಾವಿಗೀಡಾದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss