Tuesday, August 16, 2022

Latest Posts

ರಾಜ್ಯದ ಜನರಿಗೆ ಉಚಿತವಾಗಿ ಕೊರೋನಾ ಲಸಿಕೆ: ದೆಹಲಿ ಸರ್ಕಾರ ಘೋಷಣೆ

ಹೊಸದಿಗಂತ ಆನ್ ಲೈನ್ ಡೆಸ್ಕ್:

ರಾಷ್ಟ್ರ ರಾಜಧಾನಿ ಎಲ್ಲ ಜನರಿಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಕೊರೋನಾ ಲಸಿಕೆ ನೀಡಲಾಗುವುದು ಎಂದು ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿದ್ದಾರೆ.
69,000 ಕೋಟಿ ರೂ.ಗಳ ಬಜೆಟ್ ಮಂಡಿಸಿದ ದೆಹಲಿ ವಿತ್ತ ಸಚಿವ ಮನೀಶ್​ ಸಿಸೋಡಿಯಾ, ಆರೋಗ್ಯ ಕ್ಷೇತ್ರಕ್ಕೆ 9,934 ಕೋಟಿ ರೂ. ಅನುದಾನ ನೀಡಿರುವುದಾಗಿ ಘೋಷಿಸಿದ್ದಾರೆ.
ಉಚಿತ ಲಸಿಕೆಗಾಗಿ ಬಜೆಟ್​ನಲ್ಲಿ ‘ಆಮ್ ಆದ್ಮಿ ನಿಶುಲ್ಕ್ ಕೋವಿಡ್ ಲಸಿಕೆ ಯೋಜನೆ’ ಅಡಿಯಲ್ಲಿ 50 ಕೋಟಿ ರೂ. ಮೀಸಲಿಟ್ಟಿದ್ದೇವೆ.ಇನ್ನು ದಿನದ ವ್ಯಾಕ್ಸಿನೇಷನ್ ಪ್ರಮಾಣವನ್ನು 45,000 ದಿಂದ 60,000ಕ್ಕೆ ಹೆಚ್ಚಿಸಲಾಗುವುದು. ಮುಂದಿನ ಹಂತದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಲಸಿಕೆ ನೀಡಲಾಗುವುದು ಎಂದು ತಿಳಿಸಿದರು.
ಒಬ್ಬ ವ್ಯಕ್ತಿ ಖಾಸಗಿ ಆಸ್ಪತ್ರೆಯಲ್ಲಿ 250 ರೂ. ಕೊಟ್ಟು ಲಸಿಕೆ ಹಾಕಿಸಿಕೊಳ್ಳಬೇಕು. ಅದೆಷ್ಟೋ ಬಡ ಜನರು ಈ ಹಣದಲ್ಲಿ ಪಡಿತರ ಪಡೆಯಬೇಕೇ? ಅಥವಾ ಲಸಿಕೆ ಹಾಕಿಸಿಕೊಳ್ಳಬೇಕೆ ಎಂದು ಯೋಚಿಸುತ್ತಾರೆ. ಹೀಗಾಗಿ ಉಚಿತ ವ್ಯಾಕ್ಸಿನೇಷನ್​ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ಸಿಸೋಡಿಯಾ ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss