ಮಾರ್ಚ್‌ನಿಂದ 12 -14 ವರ್ಷದ ಮಕ್ಕಳಿಗೂ ಕೊರೋನಾ ಲಸಿಕೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಾರ್ಚ್‌ನಿಂದ 12 ರಿಂದ 14 ವರ್ಷದ ಮಕ್ಕಳಿಗೂ ಕೊರೋನಾ ಲಸಿಕೆ ನೀಡಲು ಪ್ರಾರಂಭಿಸಬಹುದು ಎಂದು ಎನ್‌ಟಿಜಿಐನ ಕೋವಿಡ್ ವರ್ಕಿಂಗ್ ಗ್ರೂಪ್‌ ಅಧ್ಯಕ್ಷ ಡಾ ಎನ್‌ಕೆ ಅರೋರಾ ಅವರು ಸೋಮವಾರ ಹೇಳಿದ್ದಾರೆ.
15-18 ವರ್ಷದ ಅಂದಾಜು 7.4 ಕೋಟಿ(7,40,57,000) ಮಕ್ಕಳ ಪೈಕಿ ಈಗಾಗಲೇ 3.45 ಕೋಟಿಗೂ ಹೆಚ್ಚುಕೋವಾಕ್ಸಿನ್‌ನ ಮೊದಲ ಡೋಸ್ ಲಸಿಕೆ ನೀಡಲಾಗಿದೆ. 28 ದಿನಗಳ ನಂತರ ಅವರು ಎರಡನೇ ಡೋಸ್ ಲಸಿಕೆ ಪಡೆಯಲಿದ್ದಾರೆ.
ಹೀಗಾಗಿ 15 ರಿಂದ 18 ವರ್ಷದವರಿಗೆ ಮೊದಲ ಡೋಸ್ ಬಳಿಕ ಫೆಬ್ರವರಿಯಲ್ಲಿ ಎರಡನೇ ಡೋಸ್‍ಗೂ ವ್ಯವಸ್ಥೆ ಮಾಡಿಕೊಳ್ಳಲಾಗಿದ್ದು, ಫೆಬ್ರವರಿ ಅಂತ್ಯದ ವೇಳೆಗೆ ಎರಡನೇ ಡೋಸ್ ಕೂಡಾ ನೀಡಲಾಗುವುದುಬಳಿಕ 12 ರಿಂದ 14 ವರ್ಷದೊಳಗಿನ ಮಕ್ಕಳಿಗೆ ವ್ಯಾಕ್ಸಿನ್ ನೀಡುವ ಕುರಿತು ಸರ್ಕಾರ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ ಎಂದು ಅವರು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!