ಹೊಸದಿಗಂತ ಡಿಜಿಟಲ್ ಡೆಸ್ಕ್:
571 ಕೋಟಿ ರೂ.ಗಳ ಸಿಸಿಟಿವಿ ಯೋಜನೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪದ ಮೇಲೆ ದೆಹಲಿ ಸರ್ಕಾರದ ಭ್ರಷ್ಟಾಚಾರ ನಿಗ್ರಹ ದಳ(ACB) ಮಾಜಿ ಲೋಕೋಪಯೋಗಿ ಸಚಿವ ಮತ್ತು ಹಿರಿಯ ಎಎಪಿ ನಾಯಕ ಸತ್ಯೇಂದರ್ ಜೈನ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ
ದೆಹಲಿಯಾದ್ಯಂತ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವಲ್ಲಿ ವಿಳಂಬ ಮಾಡಿದ್ದಕ್ಕಾಗಿ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್(BEL)ಗೆ ವಿಧಿಸಲಾದ 16 ಕೋಟಿ ರೂ.ದಂಡವನ್ನು ಜೈನ್ ಮನ್ನಾ ಮಾಡಿದ್ದಾರೆ ಎಂಬ ಆರೋಪವಿದೆ. 7 ಕೋಟಿ ರೂ.ಗಳ ಲಂಚ ಪಡೆದ ನಂತರ 16 ಕೋಟಿ ರೂ. ಮನ್ನಾ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಜಂಟಿ ಪೊಲೀಸ್ ಆಯುಕ್ತ(ACB) ಮಧುರ್ ವರ್ಮಾ ಹೇಳಿಕೆಯ ಪ್ರಕಾರ, ಬಿಇಎಲ್ ಮತ್ತು ಅದರ ಗುತ್ತಿಗೆದಾರರ ಮೇಲೆ ವಿಧಿಸಲಾದ ದಂಡವನ್ನು ಮನ್ನಾ ಮಾಡಲು ಸಿಸಿಟಿವಿ ಯೋಜನೆಯ ನೋಡಲ್ ಅಧಿಕಾರಿಯಾಗಿದ್ದ ಜೈನ್ ಅವರಿಗೆ 7 ಕೋಟಿ ರೂ. ಲಂಚ ನೀಡಲಾಗಿದೆ ಎಂದು ಹೇಳಲಾದ ಸುದ್ದಿ ವರದಿಯನ್ನು ಆಧರಿಸಿ ಈ ಪ್ರಕರಣವನ್ನು ದಾಖಲಿಸಲಾಗಿದ್ದು, ದೆಹಲಿ ಮಾಜಿ ಸಚಿವರು ಮತ್ತೆ ಜೈಲು ಪಾಲಾಗುವ ಸಾಧ್ಯತೆ ಇದೆ.