Tuesday, July 5, 2022

Latest Posts

ಮಂಗಳಮುಖಿಯರ ಸಂಘದಲ್ಲಿ ಭ್ರಷ್ಟಾಚಾರ: ತನಿಖೆಗೆ ಆಗ್ರಹ

ಹೊಸದಿಗಂತ ವರದಿ. ಕಲಬುರಗಿ:

ಕಲಬುರಗಿ ಮಂಗಳಮುಖಿಯರ ಸಂಘವಾದ ಸ್ನೇಹಾ ಸೊಸೈಟಿಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಬಗ್ಗೆ ತನಿಖೆ ನಡೆಸಬೇಕು ಎಂದು ದಲಿತ ಸೇನೆ ರಾಜ್ಯಾಧ್ಯಕ್ಷ ಹಣಮಂತ ಯಳಸಂಗಿ ಜಿಲ್ಲಾಡಳಿತಕ್ಕೆ ಮಂಗಳವಾರದವರೆಗೆ ಗಡುವು ನೀಡಿದ್ದಾರೆ.
ಈ ಬಗ್ಗೆ ಲೆಕ್ಕಪತ್ರ ಕೇಳಿದ ಎಂಟು ಜನ ಅಮಾಯಕ ಮಂಗಳಮುಖಿಯರ ವಿರುದ್ಧ ಸುಳ್ಳು ಕೇಸ್ ದಾಖಲಾಗಿದ್ದು, ಅವರ ವಿರುದ್ಧ ದಾಖಲಾದ ಸುಳ್ಳು ದೌರ್ಜನ್ಯ ಪ್ರಕರಣವನ್ನು ಹಿಂಪಡೆದು ಹಲ್ಲೆಗೊಳಗಾದ ಮಂಗಳಮುಖಿಯರಿಗೆ ಸೂಕ್ತ ರಕ್ಷಣೆ ಒದಗಿಸಬೇಕು. ಒಂದು ವೇಳೆ ಮಂಗಳವಾರದೊಳಗೆ ಸಕರಾತ್ಮವಾಗಿ ಸ್ಪಂದನೆ ದೊರೆಕದಿದ್ದರೆ ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದರು.
ಸ್ನೇಹಾ ಸೊಸೈಟಿಯಲ್ಲಿನ ಕೋಟ್ಯಂತರ ಹಣ ದುರುಪಯೋಗವಾಗಿದ್ದು, ಭ್ರಷ್ಟಾಚಾರದಲ್ಲಿ ತೊಡಗಿದವರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು. ಈ ಬಗ್ಗೆ ಲೆಕ್ಕ ಕೇಳಲಿಕ್ಕೆ ಹೋದರೆ ಮನೀಷಾ ತನ್ನ ಕೈಯಿಂದಲೇ ಹಣೆಗೆ ಕಲ್ಲಿನಿಂದ ಜಜ್ಜಿಕೊಂಡು ರಕ್ತಸಿಕ್ತ ಗಾಯ ಮಾಡಿಕೊಂಡಿದ್ದಾಳೆ. ಇದನ್ನೆ ನನ್ನ ಮೇಲೆ ಎಂಟು ಜನ ಹಲ್ಲೆಗೈದಿದ್ದಾರೆ ಅಂತೇಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಜಾತಿ ದೌರ್ಜನ್ಯ ಕೇಸ್ ದಾಖಲಾಸಿದ್ದಾರೆ.
ತಮ್ಮನ್ನು ಪುಣೆಯಿಂದ ಕರೆಯಿಸಿ ನ್ಯಾಯ ಪಂಚಾಯತಿ ಮಾಡುವದಾಗಿ ಹೇಳಿ ತಮ್ಮ ಮೇಲೂ ಕೇಸ್ ದಾಖಲಿಸಿದ್ದಾರೆ ಎಂದು ಮಂಗಳಮುಖಿಯರ ಗುರುಗಳಾದ ಸಂತೋಷಿಯಮ್ಮ ನೋವು ತೋಡಿಕೊಂಡರು.
ನಗರದಲ್ಲಿ 2,300 ಜನ ಮಂಗಳಮುಖಿಯರಿದ್ದು, ಖರ್ಚು ವೆಚ್ಚಗಳ ಬಗ್ಗೆ ಲೆಕ್ಕ ನೀಡಲಿ ಎಂಬುದು ಎಲ್ಲ ಮಂಗಳಮುಖಿಯರ ಒತ್ತಾಯವಾಗಿದೆ. ಮಂಗಳಮುಖಿಯರಿಂದ ಮಂಗಳಮುಖಿಯರ ಮೇಲೆ ಶಿಸ್ತು ಕ್ರಮ ಜರುಗಿಸಲು ಸಾಧ್ಯವಿಲ್ಲ, ಈ ಬಗ್ಗೆ ಕಾನೂನಿನಲ್ಲಿಯೂ ಅವಕಾಶವಿಲ್ಲ. ಆದರೆ ಅದೇ ಪುರುಷ, ಸ್ತ್ರೀಯರ ತೃತೀಯ ಲಿಂಗಿಗಳ ಮೇಲೆ ಅನ್ಯಾಯವೆಸಗಿದರೆ ಕೋರ್ಟ್‍ನಿಂದ ನ್ಯಾಯ ಸಿಗುವ ಅವಕಾಶಗಳಿವೆ. ಈ ನಿಟ್ಟಿನಲ್ಲಿ ಮಂಗಳಮುಖಿಯರಿಗೆ ಹೊರಗಿನವರು ಯಾರೂ ಸ್ಪಂದಿಸುವುದಿಲ್ಲ, ಯಾರಾದರೂ ಮಂಗಳಮುಖಿಯರು ಇಹಲೋಕ ತ್ಯಜಿಸಿದರೆ ಅಂತಿಮ ಸಂಸ್ಕಾರ ಮಾಡುವವರು ಮಂಗಳಮುಖಿಯರು ಎಂಬುದು ಗಮನದಲ್ಲಿ ಇರಲಿ ಎಂದು ಟಾಂಗ್ ನೀಡಿದರು.
ಸ್ನೇಹಾ ಸೊಸೈಟಿ ಅಧ್ಯಕ್ಷ ಯಶ್ವಂತ ಆಲಿಯಾಸ್ ಮುಷ್ಕಾನ್, ಕಾರ್ಯದರ್ಶಿ ಅಂಬಿಕಾ, ಮಂಗಳಮುಖಿಯರ ಗುರುಗಳಾದ ಪಿಕೆಯಮ್ಮ, ಸಂತೋಷಿಯಮ್ಮ, ಬೇಬಿಯಮ್ಮ, ಶೀಲಾ, ಭೀಮಾ, ದಲಿತ ಸೇನೆ ಜಿಲ್ಲಾಧ್ಯಕ್ಷ ಮಂಜುನಾಥ ಭಂಡಾರಿ ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss