ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಹುನಿರೀಕ್ಷೆಯ ಪುಷ್ಪ ಸಿನಿಮಾ ಬಹುಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ.
ಕನ್ನಡದಲ್ಲಿ ಕೂಡ ಪುಷ್ಪ ರಿಲೀಸ್ ಆಗುತ್ತಿದ್ದು, ಡಬ್ಬಿಂಗ್ ಮಾಡೋಕೆ ಆಗಿಲ್ಲ ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ.
ಸಮಯದ ಅಭಾವದಿಂದ ಡಬ್ಬಿಂಗ್ ಮಾಡೋಕೆ ಆಗಲಿಲ್ಲ. ಅಭಿಮಾನಿಗಳು ಈ ಸಿನಿಮಾವನ್ನು ಒಪ್ಪಿ ಥಿಯೇಟರ್ನಲ್ಲಿಯೇ ಬಂದು ನೋಡಬೇಕು ಎಂದು ರಶ್ಮಿಕಾ ಮನವಿ ಮಾಡಿದ್ದಾರೆ.
ಶ್ರೀವಲ್ಲಿ ಪಾತ್ರಕ್ಕೆ ನಾನು ಹೇಗೆ ಸೂಟ್ ಆಗ್ತೀನಿ ಅಂತ ನಾನೂ ಅಂದುಕೊಂಡಿದ್ದೆ. ಆದರೆ ನಿರ್ದೇಶಕರು ನನ್ನಿಂದ ಉತ್ತಮ ಕೆಲಸ ತೆಗೆದಿದ್ದಾರೆ. ಅಲ್ಲದೇ ನಟ ಅಲ್ಲು ಅರ್ಜುನ್ ಜೊತೆ ಅಭಿನಯ ಮಾಡೋ ಅವಕಾಶ ಸಿಕ್ಕಿದ್ದು ತುಂಬಾ ಖುಷಿ ವಿಷಯ ಎಂದು ರಶ್ಮಿಕಾ ಹೇಳಿದ್ದಾರೆ.
ಈ ಸಿನಿಮಾಗಾಗಿ ನಾನು ಕಾದಿದ್ದೇನೆ. ಅಭಿಮಾನಿಗಳ ಜೊತೆಗೆ ಕುಳಿತು ಸಿನಿಮಾ ನೋಡ್ತೇನೆ ಎಂದು ಹೇಳಿದ್ದಾರೆ.