Monday, March 1, 2021

Latest Posts

ಶತಕ ಬಾರಿಸಲು ಶಕ್ತವಾಗದೇ ಇದ್ದದ್ದು ತನ್ನ ಜೀವನದ ಅತ್ಯಂತ ಕಠಿಣ ಕ್ಷಣ: ವಿರಾಟ್ ಕೊಹ್ಲಿ

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಕಳೆದ ಒಂದು ವರ್ಷದಿಂದೀಚೆಗೆ ಒಂದೇ ಶತಕವನ್ನು ಬಾರಿಸಲು ಶಕ್ತವಾಗದೇ ಇದ್ದದ್ದು
ತನ್ನ ಜೀವನದ ಅತ್ಯಂತ ಕಠಿಣ ಕ್ಷಣವಾಗಿತ್ತು ಎಂದು ವಿರಾಟ್ ಕೊಹ್ಲಿ ಇತ್ತೀಚೆಗೆ ಹೇಳಿಕೊಂಡಿದ್ದಾರೆ.
ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ಆಟಗಾರ ಮಾರ್ಕ್ ನಿಕೋಲಸ್ ಜೊತೆಗೆ ಸಂವಾದಲ್ಲಿ ಪಾಲ್ಗೊಂಡ ವಿರಾಟ್ ಕೊಹ್ಲಿ, ತಮ್ಮ ವೃತ್ತಿ ಜೀವನದ ಕಠಿಣ ಸಂದರ್ಭದ ಬಗ್ಗೆ ಮನ ಬಿಚ್ಚಿ ಮಾತನಾಡಿದ್ದಾರೆ. 2014ರ ಇಂಗ್ಲೆಂಡ್ ಪ್ರವಾಸ ನನಗೆ ಬಹಳಷ್ಟು ಕಠಿಣವಾಗಿತ್ತು.
ಆ ಸಂದರ್ಭದಲ್ಲಿ ನಾನು ಮಾನಸಿಕ ಒತ್ತಡಕ್ಕೆ ಒಳಗಾಗಿದ್ದೆ. ಆ ಸರಣಿಯಲ್ಲಿ ನಾಣು ಅತ್ಯಂತ ಕಳಪೆ ಫಾರ್ಮ್‌ನಲ್ಲಿದ್ದೆ. ಹೀಗಾಗಿ ಹೆಚ್ಚಿನ
ರನ್ ಗಳಿಸಲು ಸಾಧ್ಯವಾಗಿಲ್ಲ ಎಂದು ಆ ಕಹಿ ದಿನಗಳ ನೆನಪಿಸಿಕೊಂಡಿದ್ದಾರೆ.

ಬ್ಯಾಟಿಂಗ್ ಸರಾಸರಿ 13.50!
‘ಆ ಸರಣಿಯ ಐದು ಪಂದ್ಯಗಳ 10 ಇನ್ನಿಂಗ್ಸ್‌ಗಳಲ್ಲಿ ವಿರಾಟ್ ಕೊಹ್ಲಿ 1, 8, 25, 0, 39, 28, 0, 7, 6ಮತ್ತು 20  ರನ್ ಗಳಿಸಿಸಿದ್ದೆ. ಬ್ಯಾಟಿಂಗ್ ಸರಾಸರಿ 13.50 ಇತ್ತು. ಇಂತಾ ಪರಿಸ್ಥಿತಿಯಿಂದ ಹೇಗೆ ಹೊರ ಬರುವುದು ಎಂಬುದು ನನಗೆ ತಿಳಿಯಲಿಲ್ಲ. ಆಗ ನನಗೆ
ನಾನು ಜಗತ್ತಿನಲ್ಲಿ ಅತ್ಯಂತ ಏಕಾಂಗಿ ಮನುಷ್ಯ ಎಂದೆನಿಸಿತ್ತು’ ಎಂದು ವಿರಾಟ್ ಕೊಹ್ಲಿ ಬೇಸರ ವ್ಯಕ್ತಪಡಿಸಿದರು. ಅಂತಹ ಸಂದರ್ಭ
ದಲ್ಲಿ ನನ್ನೊಂದಿಗೆ ಸ್ನೇಹಿತರು, ಆಪ್ತರು ಇದ್ದರು ಎಂದು ತಿಳಿಸಿದರು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

Don't Miss

error: Content is protected !!