ಹೊಸ ದಿಗಂತ ವರದಿ ವಿಜಯಪುರ:
ಅವಳಿ ಜಿಲ್ಲೆ ವಿಜಯಪುರ- ಬಾಗಲಕೋಟೆ ದ್ವಿಸದಸ್ಯ ಸ್ಥಾನದ ಸ್ಥಳೀಯ ಸಂಸ್ಥೆಯ ವಿಧಾನ ಪರಿಷತ್ ಚುನಾವಣೆಯಲ್ಲಿ ಜಿಲ್ಲೆಯ ಮುದ್ದೇಬಿಹಾಳ ತಾಲೂಕು ಬಿದರಕುಂದಿ ಗ್ರಾಪಂನಲ್ಲಿ ಮತದಾನ ಆರಂಭವಾದ ಮೂರೇ ಗಂಟೆಯಲ್ಲಿ ಮತದಾನ ಪೂರ್ಣಗೊಂಡು, ಶೇ. 100 ರಷ್ಟು ಮತದಾನವಾಗಿದೆ.
ಇಲ್ಲಿನ ಎಲ್ಲ 14 ಸದಸ್ಯರು ಮತ ಚಲಾಯಿಸಿದ್ದು, ಮತದಾನ ಪ್ರಾರಂಭಗೊಂಡ 3 ಗಂಟೆಯೊಳಗೆ ಶೇ. 100 ರಷ್ಟು ಮತದಾನವಾದ ಮೊದಲ ಗ್ರಾಮ ಪಂಚಾಯಿತಿಗೆ ಇದು ಭಾಜನವಾಗಿದೆ.