ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ದಿಗಂತ ವರದಿ ಯಾದಗಿರಿ :
ಕಳೆದ 15 ದಿನಗಳಿಂದ ಸತತವಾಗಿ ಮಳೆ ಸುರಿಯುತ್ತಿರುವದರಿಂದ ಜಿಲ್ಲೆಯ ಹತ್ತಿಕುಣಿ ಮತ್ತು ಸೌದಾಗರ ಜಲಾಸಯಗಳು ಭರ್ತಿಯಾಗುತ್ತಿವೆ.
ಜಲಾಶಯ ಭರ್ತಿಯಾದ ಹಿನ್ನೆಲಯಲ್ಲಿ ನೀರಾವರಿ ಅದಿಕಾರಿಗಳು ಕಾಲುವೆ ನೀರು ಬಿಡಲು ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ರೈತರ ಮೊಗದಲ್ಲಿ ಸಂತಸದ ಲಕ್ಷಣಗಳು ಕಂಡುಬರುತ್ತಿವೆ.
ಈ ಭಾಗದ ರೈತರ ಜೀವನಾಡಿಯಾಗಿರುವ ಜಲಾಶಯ ಬೇಗನೆ ಭರ್ತಿಯಾಗಿರುವುದರಿಂದ ಹತ್ತಿಕುಣಿ, ಯಡ್ಡಳ್ಳಿ, ಬಂದಳ್ಳಿ, ಹೊನಗೇರಾ, ಕಟಗಿಶಹಾಪೂರ, ದಸರಾಬಾದ್ ಗ್ರಾಮಗಳ ಒಟ್ಟು 5300 ಎಕರೆ ಜಮೀನು ನೀರಾವರಿ ಸವಲತ್ತು ಸಿಗುತ್ತದೆ.
ರೈತರು ಭತ್ತ, ಶೇಂಗಾ, ಹತ್ತಿ, ಜೋಳ, ಸಜ್ಜೆ, ಇನ್ನಿತರ ಬೆಳೆಗಳನ್ನು ಬೆಳೆಯಲು ಸಹಕಾರಿಯಾಗುತ್ತದೆ. ಅವರು ಈಗಾಗಲೇ ಕೃಷಿ ಚಟುವಟಿಕೆಗಳ ತಯಾರಿಯಲ್ಲಿ ತೊಡಗಿದ್ದಾರೆ. ಕೆಂಪು ಮಿಶ್ರಿತ ಭೂಮಿ ಇರುವುದರಿಂದ ಹೆಚ್ಚಿನ ಪ್ರಮಾಣದ ವಾಣಿಜ್ಯ ಬೆಳೆಯಾದ ಶೇಂಗಾ ಬಿತ್ತನೆ ಮಾಡುತ್ತಾರೆ. ಇದಕ್ಕೆ ಉತ್ತಮ ಬೆಲೆಯು ಸಿಗುತ್ತದೆ.
ಜಲಾಶಯ ವಿಶಾಲವಾಗಿದ್ದು ಮೇಲ್ಭಾಗದ ಮೋಟ್ನಳ್ಳಿ, ಕೋಟಗೇರಾ, ಕೆರೆಗಳು ಈಗಾಗಲೇ ತುಂಬಿರುವದರಿAದ ಹೆಚ್ಚು ನೀರು ನಿರಂತರ ಜಲಾಶಯಕ್ಕೆ ಹರಿದು ಬರುತ್ತಿದೆ ಒಟ್ಟು 0.352 ಟಿಎಮ್ಸಿ ನೀರು ಸಂಗ್ರಹ ಸಾಮಾರ್ಥ್ಯ ಹೊಂದಿರುವ ಜಲಾಶಯದಲ್ಲಿ ಈಗಾಗಲೇ 0.305 ಟಿಎಮ್ಸಿ ನೀರು ಸಂಗ್ರಹವಿದೆ ಇನ್ನೂ ಹೆಚ್ಚು ನೀರು ಹರಿದು ಬಂದರೆ ಜಲಾಶಯದ ಗೇಟ್ಗಳನ್ನು ತೆರೆಯಲು ನೀರಾವರಿ ಇಂಜಿನೀಯರ್ ತಮ್ಮ ಸಿಬ್ಬಂದಿಗಳೊAದಿಗೆ ಸ್ಥಳದಲ್ಲಿ ಉಪಸ್ಥಿತರಿದ್ದಾರೆ.
ಈಗಾಗಲೇ ಜಿಲ್ಲಾಡಳಿತ ಯಾವ ಸಂದರ್ಭದಲ್ಲೂ ಹಳ್ಳಕ್ಕೆ ಹಚ್ಚುವರಿ ನೀರನ್ನು ಬಿಡುವ ಸಾಧ್ಯತೆ ಇದೆ. ಅದಕ್ಕಾಗಿ ಹಳ್ಳದ ಪಕ್ಕಷದ ಜನರಿಗೆ ಮುನ್ನೆಚ್ಚರಿಕೆ ನೀಡಿದ್ದಾರೆ.
ಜಿಲ್ಲೆಯ ಪ್ರವಾಸಿ ಕೇಂದ್ರಗಳಲ್ಲಿ ಒಂದಾದ ಹತ್ತಿಕುಣಿ ಜಲಾಶಯಕ್ಕೆ ಹರಿದು ಬರುತ್ತಿರುವ ಜನರು : ಜಲಾಶಯ ಭರ್ತಿಯಾಗಿದೆ ಎಂಬ ಸುದ್ಧಿ ತಿಳಿಯುತ್ತಿದ್ದಂತೆ ಹತ್ತಿಕುಣಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಯುವಕರು ಹಾಗೂ ರೈತರು ಜಲಾಶಯಕ್ಕೆ ಬೆಳಿಗ್ಗೆಯಿಂದಲೇ ಆಗಮಿಸಿ ಜಲಾಶಯ ವೀಕ್ಷಿಸುತ್ತಿದ್ದಾರೆ.
ಈಗಾಗಲೇ ಅಲ್ಲಿನ ಪ್ರವಾಸಿ ಮಂದಿರದ ಮುಂಭಾಗದಲ್ಲಿ ಗುರುಮಿಠಕಲ್ ಮತಕ್ಷೇತ್ರದ ನಾಗನಗೌಡ ಕಂದಕೂರು ಅವರು ಪ್ರವಾಸೋದ್ಯಮ ಇಲಾಖೆಯಿಂದ ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಉದ್ಯಾನವನ, ಮಕ್ಕಳು ಆಟವಾಡಲು ಸೂಕ್ತ ವಾತಾವರಣ ನಿರ್ಮಾಣ ಮಾಡಿರುವುದರಿಂದ ಜನರು ಜಲಾಶಯ, ನಿಸರ್ಗದ ಸೌಂದರ್ಯವನ್ನು ಸವಿದು ತೆರಳುತ್ತಿದ್ದಾರೆ.