Monday, August 8, 2022

Latest Posts

ಬೆಂಗಳೂರಲ್ಲಿ ಖೋಟಾನೋಟು ದಂಧೆ: 80 ಲಕ್ಷ ಹಳೇ ನೋಟು ಜಪ್ತಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇಂದ್ರ ಸರ್ಕಾರ ರದ್ದು ಮಾಡಿರುವ ಹಳೇ ನೋಟುಗಳನ್ನು ಬದಲಾವಣೆ ಮಾಡಿಸಿ ಕಲರ್ ಜೆರಾಕ್ಸ್ ಮಾಡಿ ಬದಲಾವಣೆ ಮಾಡುತ್ತಿದ್ದ 5 ಮಂದಿ ಖೋಟಾನೋಟು ದಂಧೆಕೋರರನ್ನು ಪೂರ್ವ ವಿಭಾಗದ ಗೋವಿಂದಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳಿಂದ 80 ಲಕ್ಷ ಅಮಾನೀಕರಣಗೊಂಡಿ ರುವ ನೋಟುಗಳು ಹಾಗೂ 5 ಕೋಟಿಯಷ್ಟು ಕಲರ್ ಜೆರಾಕ್ಸ್ ಮಾಡಿರುವ ನಕಲಿ ನೋಟುಗಳನ್ನು ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
‘ಎಚ್‌ಬಿಆರ್ ಬಡಾವಣೆ ಬಳಿಯ ಪೆಟ್ರೋಲ್ ಬಂಕ್ ಬಳಿ ಕಾರ್ಯಾಚರಣೆ ನಡೆಸಿದ ಪೊಲೀಸರು , ₹ 5 ಕೋಟಿ ಮೊತ್ತದ ಕಲರ್ ಜೆರಾಕ್ಸ್ ನೋಟುಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೂರ್ವ ವಿಭಾಗದ ಡಿಸಿಪಿ ಎಸ್‌.ಡಿ.ಶರಣಪ್ಪ ಹೇಳಿದರು.
‘ಕೆ.ಆರ್.ಪುರದ ಸುರೇಶ್‌ಕುಮಾರ್, ರಾಜಾಜಿನಗರದ ರಾಮಕೃಷ್ಣ, ಆನೇಕಲ್‌ನ ಮಂಜುನಾಥ್, ಹೊಂಗಸಂದ್ರದ ವೆಂಕಟೇಶ್, ದೇವಾನಂದ ಬಂಧಿತರು’ ಎಂದೂ ತಿಳಿಸಿದರು.
‘₹ 500 ಹಾಗೂ ₹ 1,000 ಮುಖಬೆಲೆಯ ಹಳೇ ನೋಟುಗಳನ್ನು ಕಲರ್‌ ಜೆರಾಕ್ಸ್ ಮಾಡಿಸುತ್ತಿದ್ದ ಆರೋಪಿಗಳು, ಕಂತೆಗಳನ್ನಾಗಿ ಮಾಡುತ್ತಿದ್ದರು. ಇಂಥ ಕಂತೆಗಳನ್ನೇ ಕೇರಳದ ಬೇನೂರು- ಕುಂದಡುಕ್ಕಂ ರಸ್ತೆಯಲ್ಲಿರುವ ಫಾರ್ಮ್‌ಹೌಸ್‌ನಲ್ಲಿ ಇರಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss