Tuesday, August 16, 2022

Latest Posts

ಗುಜರಾತ್ ಸ್ಥಳೀಯ ಚುನಾವಣೆಯ ಮತ ಎಣಿಕೆ: ಭಾಜಪಗೆ ಭಾರೀ ಮುನ್ನಡೆ

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಗುಜರಾತ್ ನಲ್ಲಿ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಿದ್ದು, ಇಲ್ಲಿಯವರೆಗಿನ ಮತ ಎಣಿಕೆಯಲ್ಲಿ ಕಾಂಗ್ರೆಸ್ ವಿರುದ್ಧ ಬಿಜೆಪಿ ಭರ್ಜರಿ ಮುನ್ನಡೆ ಸಾಧಿಸಿದೆ.

ಒಟ್ಟೂ 81 ಪುರಸಭೆ ಸ್ಥಾನಗಳಲ್ಲಿ  ಮತ ಎಣಿಕೆ ನಡೆಯುತ್ತಿದ್ದು 54ರಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ಉಳಿದಂತೆ ಕಾಂಗ್ರೆಸ್​ 2 ಮತ್ತು ಕೇಜ್ರಿವಾಲ್​ ಅವರ ಆಮ್​ ಆದ್ಮಿ ಪಕ್ಷ ಒಂದರಲ್ಲಿ ಸ್ಥಾನ ಪಡೆದಿದೆ.

ಪುರಸಭೆ, ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಮೇಲುಗೈ ಸಾಧಿಸಿದೆ. ಒಟ್ಟು 31 ಜಿಲ್ಲಾ ಪಂಚಾಯತ್​ ಸ್ಥಾನಗಳಲ್ಲಿ 12ರಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ. ಹಾಗೆಯೇ 131 ತಾಲೂಕು ಪಂಚಾಯತಿಗಳಲ್ಲಿ 51 ರಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ.

ಫೆ.28 ರಂದು ಪುರಸಭೆಗಳ 680 ವಾರ್ಡ್‌, ಜಿಲ್ಲಾ ಪಂಚಾಯತ್‌ಗಳ 980 ಹಾಗೂ ತಾಲೂಕು ಪಂಚಾಯತ್‌ಗಳ 8,474 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಒಟ್ಟು 8,235 ಸ್ಥಾನಗಳಿಗೆ ಬಿಜೆಪಿ 8,161 ಅಭ್ಯರ್ಥಿಗಳನ್ನು, ಕಾಂಗ್ರೆಸ್​ 7,778 ಹಾಗೂ ಆಮ್​ ಆದ್ಮಿ 2,090 ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss