ದೇಶದ ಹೆಣ್ಣುಮಕ್ಕಳು ಉರ್ಫಿ ಜಾವೇದ್ ರೀತಿ ಇರಬೇಕು: ಯೋ ಯೋ ಹನಿ ಸಿಂಗ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನಟಿ ಉರ್ಫಿ ಜಾವೇದ್ ಒಂದಿಲ್ಲೊಂದು ಕಾರಣಕ್ಕೆ ಸದಾ ಸುದ್ದಿಯಲ್ಲಿತ್ತಾರೆ. ತಮ್ಮ ವಿಚಿತ್ರ ಬಟ್ಟೆಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಯಾವಾಗಲೂ ಚರ್ಚೆಯ ವಿಷಯ ಆಗುತ್ತಿರುವ ಉರ್ಫಿ ಜಾವೇದ್ ಟ್ರೋಲ್‌ಗೆ ಒಳಗಾಗುತ್ತಾರೆ. ಜೊತೆಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಆದ್ರೆ ಇತ್ತ ದೇಶದ ಹೆಣ್ಣುಮಕ್ಕಳು ಉರ್ಫಿ ಜಾವೇದ್ ರೀತಿ ಇರಬೇಕು ಎಂದು ಯೋ ಯೋ ಹನಿ ಸಿಂಗ್ ಹೇಳಿದ್ದಾರೆ. ಇದೀಗ ಈ ಹೇಳಿಕೆ ಮತ್ತೊಂದು ಚರ್ಚೆಗೆ ವೇದಿಕೆ ಸಿದ್ಧಿಗೊಳಿಸಿದೆ.

ಯೋ ಯೋ ಹನಿ ಸಿಂಗ್ ಅವರು ಮತ್ತೆ ಮ್ಯೂಸಿಕ್ ಇಂಡಸ್ಟ್ರಿಯಲ್ಲಿ ಸಕ್ರಿಯರಾಗಿದ್ದಾರೆ. ಅವರ ಹೊಸ ಆಲ್ಬಂ ‘ಹನಿ ಸಿಂಗ್ 3.0′ ಪ್ರಚಾರದ ವೇಳೆ ವಿವಿಧ ಮಾಧ್ಯಮಗಳಿಗೆ ಅವರು ಸಂದರ್ಶನ ನೀಡಿದ್ದಾರೆ. ಈ ವೇಳೆ ಅವರು ಉರ್ಫಿ ಜಾವೇದ್​ ಬಗ್ಗೆ ಮಾತನಾಡಿದ್ದಾರೆ.

‘ಉರ್ಫಿ ಜಾವೇದ್​ ನನಗೆ ತುಂಬ ಇಷ್ಟ. ಆಕೆ ಬಹಳ ಧೈರ್ಯವಂತೆ. ತನ್ನದೇ ರೀತಿಯಲ್ಲಿ ಆಕೆ ಬದುಕಲು ಬಯಸುತ್ತಾಳೆ. ನಮ್ಮ ದೇಶದ ಎಲ್ಲ ಹುಡುಗಿಯರು ಉರ್ಫಿಯನ್ನು ನೋಡಿ ಕಲಿಯಬೇಕು. ಯಾರ ಭಯವೂ ಇಲ್ಲದೇ, ಯಾವ ಹಿಂಜರಿಕೆಯೂ ಇಲ್ಲದೇ ನಿಮಗೆ ಅನಿಸಿದ್ದನ್ನು ಮಾಡಬೇಕು’ ಎಂದು ಹನಿ ಸಿಂಗ್​ ಹೇಳಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!