ಕಾರ್ಯಾರಂಭವಾಯ್ತು ದೇಶದ ಮೊದಲ ‘ಟ್ರಾನ್ಸ್ ಟೀ ಸ್ಟಾಲ್’

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗುವಾಹಟಿಯ ರೈಲ್ವೆ ನಿಲ್ದಾಣದಲ್ಲಿ ತೃತೀಯಲಿಂಗಿ ಸಮುದಾಯವನ್ನು ಸಬಲೀಕರಿಸುವ ಸಲುವಾಗಿ ಟ್ರಾನ್ಸ್ ಟೀ ಸ್ಟಾಲ್ ಕಾರ್ಯಾರಂಭ ಮಾಡಲಾಗಿದೆ.

ಈಶಾನ್ಯ ಫ್ರಾಂಟಿಯರ್ ರೈಲ್ವೆಯ ಟ್ರಾನ್ಸ್ ಟೀ ಸ್ಟಾಲ್ ದೇಶದಲ್ಲೇ ಮೊದಲ ಟ್ರಾನ್ಸ್ ಟೀ ಸ್ಟಾಲ್ ಎಂದು ಹೇಳಲಾಗಿದೆ. ಆಲ್ ಅಸ್ಸಾಂ ಟ್ರಾನ್ಸ್‌ಜೆಂಡರ್ ಅಸೋಸಿಯೇಷನ್‌ನ ಸಹಯೋಗದಿಂದ ಆರಂಭಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಗುವಾಹಟಿ ರೈಲ್ವೆ ನಿಲ್ದಾಣದ ಪ್ಲಾಟ್‌ಫಾರ್ಮ್ ಸಂಖ್ಯೆ೧ರಲ್ಲಿ ಈಶಾನ್ಯ ಗಡಿ ರೈಲ್ವೆಯ ಜನರಲ್ ಮ್ಯಾನೇಜರ್ ಅನ್ಶುಲ್ ಗುಪಾ ಟೀಸ್ಟಾಲ್ ಉದ್ಘಾಟನೆ ಮಾಡಿದ್ದಾರೆ.

ಕಮ್ರೂಪ್ ಡೆಪ್ಯುಟಿ ಕಮಿಷನರ್ ಕಚೇರಿ ಆವರಣದಲ್ಲಿ ಟ್ರಾನ್ಸ್ ಟೀ ಸ್ಟಾಲ್ ಆರಂಭಿಸಲಾಗಿದೆ. ಟ್ರಾನ್ಸ್‌ಜೆಂಡರ್‌ಗಳಿಗಾಗಿ ಕೇಂದ್ರದ ಸಮಗ್ರ ಯೋಜನೆಯ ಭಾಗ ಇದಾಗಿದೆ. ಉದ್ಯಮ ಕ್ಷೇತ್ರದಲ್ಲಿ ಹಿಂದಿರುವ ಇವರಿಗೆ ಉತ್ತಮ ಉದ್ಯೋಗ ಕಲ್ಪಿಸಬೇಕಿದೆ. ಬೆಂಬಲ ನೀಡುವ ನಿಟ್ಟಿನಲ್ಲಿ ಈ ಯೋಜನೆಯನ್ನು ಮಾಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!