ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಇಂದಿನಿಂದ ನಾಲ್ಕು ದಿನ ದೇಶದಲ್ಲಿ ಲಸಿಕೆ ಉತ್ಸವ ಅಥವಾ ಆಂದೋಲನ ಆರಂಭವಾಗಿದ್ದು, ಕೊರೋನಾ ತಡೆಗಟ್ಟುವ ನಿಟ್ಟಿನಲ್ಲಿ ಜನರು ಲಸಿಕೆ ಹಾಕಿಸಿಕೊಳ್ಳುವಂತೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಮನವಿ ಮಾಡಿವೆ.
ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದು, ಇಂದಿನಿಂದ ದೇಶಾದ್ಯಂತ ಕೊರೋನಾ ಲಸಿಕೆ ಉತ್ಸವ ಆರಂಭವಾಗಿದ್ದು, ದೇಶವಾಸಿಗಳ ಮುಂದೆ ನನ್ನ ನಾಲ್ಕು ಮನವಿಯನ್ನು ಇಡುತ್ತೇನೆ ಎಂದು ಲೇಖನದ ಪುಟವನ್ನು ಮೋದಿ ಪ್ರಕಟಿಸಿದ್ದಾರೆ.
ಮೋದಿ ಮನವಿ ಹೀಗಿದೆ….
- ಮೈಕ್ರೊಕಂಟೈನ್ಮೆಂಟ್ ವಲಯವನ್ನು ಸೃಷ್ಟಿಸಿ.
- ಒಬ್ಬರು ಮತ್ತೊಬ್ಬರಿಗೆ ಲಸಿಕೆ ಹಾಕಿಸಿ.
- ಒಬ್ಬರು ಮತ್ತೊಬ್ಬರಿಗೆ ಸಹಕಾರ ನೀಡಿ.
- ಒಬ್ಬರು ಮತ್ತೊಬ್ಬರನ್ನು ಉಳಿಸಿ, ಎಂದಿದ್ದಾರೆ.
आज से हम सभी, देशभर में टीका उत्सव की शुरुआत कर रहे हैं। कोरोना के खिलाफ लड़ाई के इस चरण में देशवासियों से मेरे चार आग्रह हैं… https://t.co/8zXZ0bqYgl
— Narendra Modi (@narendramodi) April 11, 2021