Thursday, July 7, 2022

Latest Posts

ಮಂಟಪಕ್ಕೆ ತೆರಳಲು ಪಾತ್ರೆಯೇ ದೋಣಿ, ಈ ಜೋಡಿ ಮದುವೆಮನೆ ತಲುಪಿದ್ದು ಹೀಗೆ…

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಕೇರಳದಲ್ಲಿ ಕಳೆದ ಮೂರು ದಿನಗಳಿಂದ ಭಾರೀ ಮಳೆ ಸುರಿಯುತ್ತಿದೆ. ಮಳೆಯಲ್ಲಿಯೂ ಜೋಡಿಯೊಂದು ದೊಡ್ಡ ಪಾತ್ರೆಯೊಳಗೆ ಕುಳಿತು ಮದುವೆ ಮಂಟಪ ಸೇರಿದೆ.
ಈ ಫೋಟೊಗಳು ಎಲ್ಲೆಡೆ ವೈರಲ್ ಆಗಿದ್ದು, ನಿಂತ ನೀರಿನಲ್ಲಿ ಬಟ್ಟೆ ನೆನೆಯದಿರಲು ಇವರು ಮಾಡಿರುವ ಐಡಿಯಾಗೆ ಭೇಷ್ ಎಂದಿದ್ದಾರೆ.
ಆರೋಗ್ಯ ಕಾರ್ಯಕರ್ತರಾದ ಆಕಾಶ್ ಮತ್ತು ಐಶ್ವರ್ಯ ಜೋಡಿ ಮದುವೆ ಮಂಟಪಕ್ಕೆ ಹೋಗಲಾರದೆ ಸಮಸ್ಯೆ ಅನುಭವಿಸುತ್ತಿದ್ದರು. ತದನಂತರ ಮದುವೆ ಅಡುಗೆಗೆ ತರಿಸಿದ್ದ ದೊಡ್ ಪಾತ್ರೆಯಲ್ಲಿ ವಧುವರರನ್ನು ಮಂಟಪಕ್ಕೆ ತಲುಪಿಸಲಾಗಿದೆ.
ಆಕಾಶ್ ಮತ್ತು ಐಶ್ವರ್ಯ ಸರಳವಾಗಿ ದೇವಸ್ಥಾನದಲ್ಲಿ ಮದುವೆಯಾಗಲು ನಿರ್ಧರಿಸಿದ್ದರು, ಆದರೆ ಇದಕ್ಕೆ ಮಳೆರಾಯ ಅಡ್ಡಿವ್ಯಕ್ತಪಡಿಸಿದ್ದ. ಸ್ಥಳೀಯರೊಬ್ಬರ ಐಡಿಯಾದಿಂದ ಮದುಮಕ್ಕಳು ಮಂಟಪ ತಲುಪಿ ಮದುವೆಯಾಗಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss