ಮೆಟ್ರೋದಲ್ಲಿ ದಂಪತಿಗಳ ಕಿಸ್ಸಿಂಗ್‌: ಗರಂ ಆದ ಸಾರ್ವಜನಿಕರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ದೆಹಲಿಯ ಮೆಟ್ರೋದಲ್ಲಿ ದಂಪತಿಗಳು ಪರಸ್ಪರ ಒಬ್ಬರನ್ನೊಬ್ಬರು ತಬ್ಬಿಕೊಂಡು ಚುಂಬಿಸುತ್ತಿರುವ ವಿಡಿಯೋ ಇದೀಗಾ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.
ಈ ವಿಡಿಯೋ ಟ್ವಿಟರ್​​ನಲ್ಲಿ ವೈರಲ್​ ಆಗುತ್ತಿದ್ದಂತೆ ಸಾಕಷ್ಟು ಟೀಕೆಗೆ ಕಾರಣವಾಗಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ಅವರಿಗೆ ತಿಳಿಸಿಕೊಡಿ ಎಂದು ಬಳಕೆದಾರರೊಬ್ಬರು ಕಾಮೆಂಟ್​ ಮಾಡಿದ್ದಾರೆ. ಇದಲ್ಲದೇ ಸಾರ್ವಜನಿಕ ಸ್ಥಳಗಳಲ್ಲಿ ಈ ರೀತಿ ನಡೆದುಕೊಳ್ಳುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಿ ಎಂದು ಇನ್ನೊಬ್ಬ ಬಳಕೆದಾರರು ಬರೆದುಕೊಂಡಿದ್ದಾರೆ. ಇದರ ಜೊತೆಗೆ ದಂಪತಿಗಳ ಖಾಸಗಿ ವಿಡಿಯೋವನ್ನು ಹೇಗೆ ಶೇರ್​​​​ ಮಾಡಿದ್ದೀರಿ ಎಂದು ಇನ್ನೊಬ್ಬ ಬಳಕೆದಾರ ಪ್ರಶ್ನೆ ಮಾಡಿದ್ದಾನೆ.

ಮಹಿಳೆಯೊಬ್ಬಳು ಇದನ್ನು ಟ್ವಿಟರ್‌ನಲ್ಲಿ ಶೇರ್‌ ಮಾಡಿಕೊಂಡಿದ್ದು, ದೆಹಲಿಯ ನಾಚಿಕೆಗೇಡಿನ ವೈರಲ್‌ ವಿಡಿಯೋ ಇದು. ಪಾಟ್ನಾ ಜಂಕ್ಷನ್‌ನ ಘಟನೆಯ ಬಳಿಕ, ದೆಹಲಿ ಮೆಟ್ರೋ ಟ್ರೇನ್‌ನಲ್ಲಿ ಒಮ್ಮೆಲೆ ಎಲ್ಲಾ ಪ್ರಯಾಣಿಕರು ತಲೆತಗ್ಗಿಸುವಂತಾಯಿತು. ಶಾಂತವಾಗಿ ಕಿಸ್‌ ಮಾಡುತ್ತಿರುವ ವಿಡಿಯೋ, ನಾಚಿಕೆಗೇಡು’ ಎಂದು ಬರೆದುಕೊಂಡಿದ್ದಾರೆ.

ಇತ್ತೀಚೆಗೆ ಮೆಟ್ರೋದಲ್ಲಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯವಾಗಿ ವರ್ತಿಸುವುದು ಹೆಚ್ಚಾಗಿ ಬಿಟ್ಟಿದೆ. ತ್ತೀಚೆಗಷ್ಟೇ ಮಹಿಳೆಯೊಬ್ಬಳು ದೆಹಲಿನ ಮೆಟ್ರೋ ಸ್ಟೇಷನ್​​​ನಲ್ಲಿ ಭೋಜ್‌ಪುರಿ ಹಾಡಿಗೆ ಸ್ಟೆಪ್​​ ಹಾಕಿದ್ದು ಭಾರೀ ಸುದ್ದಿಯಾಗಿತ್ತು. ಜೊತೆಗೆ ಯುವತಿಯೊಬ್ಬಳು ತುಂಡುಡುಗೆ ತೊಟ್ಟು ದೆಹಲಿ ಮೆಟ್ರೋ ಹತ್ತಿದ್ದಾಳೆ, ಹುಡುಗಿ ಇತರ ಮಹಿಳಾ ಪ್ರಯಾಣಿಕರೊಂದಿಗೆ ಚಿಕ್ಕ ಬಟ್ಟೆಯಲ್ಲಿ ಮೆಟ್ರೋ ಕೋಚ್‌ನಲ್ಲಿ ಕುಳಿತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!