ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………………………………………………
ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಕೊರೋನಾ ಸೋಂಕು ತಗುಲದಂತೆ ತಡೆಯಲು ಮಾಸ್ಕ್ ತೊಟ್ಟು, ಪಿಪಿಇ ಕಿಟ್ ಧರಿಸಿಕೊಂಡು ವಿವಾಹವಾಗುವುದನ್ನು ನೋಡಿದ್ದೇವೆ. ಆದರೆ ಇಲ್ಲೊಂದು ಜೋಡಿ ವಿಶೇಷ ಐಡಿಯಾದೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಹೌದು… ಬಿಹಾರದ ಬೇಗುಸಾರಾಯ್ನಲ್ಲಿ ವಧು-ವರ ಉದ್ದದ ಬಿದಿರು ಕಡ್ಡಿಗಳಳಲ್ಲಿ ಹಾರವನ್ನು ಸಿಕ್ಕಿಸಿಕೊಂಡು, ದೂರದಿಂದಲೇ ಹಾರ ಬದಲಾಯಿಸಿಕೊಂಡಿದ್ದಾರೆ. ಇದೀಗ ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.
ಈ 19 ಸೆಕೆಂಡಿನ ವಿಡಿಯೋವನ್ನು ಛತ್ತೀಸ್ಘಡದ ಸಾರಿಗೆ ಆಯುಕ್ತರಾದ ದೀಪಾನ್ಶು ಕಬ್ರಾ ಅವರು ಶೇರ್ ಮಾಡಿದ್ದು, ಸಾವಿರಾರು ಜನ ಲೈಕ್, ಕಮೆಂಟ್ ಮಾಡಿದ್ದಾರೆ.
#कोरोना में शादियां सफलतापूर्वक संपन्न कराने के लिए इवेंट मैनेजर्स को क्या क्या जुगाड़ू समाधान निकालना पड़ता है…. 😅😅 pic.twitter.com/2WOc9ld0rU
— Dipanshu Kabra (@ipskabra) May 2, 2021