‘COVAXIN’ | ಅಂತೂ ಭಾರತದಲ್ಲೇ ತಯಾರಾಗಿದೆ ಕೊರೋನಾ ಲಸಿಕೆ: ಮಾನವ ಪ್ರಯೋಗಕ್ಕೆ ಡಿಸಿಜಿಐ ಅನುಮತಿ

0
1609

ಹೈದರಾಬಾದ್: ಕೊರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ಭಾರತ ಮುಂಚೂಣಿಯಲ್ಲಿದ್ದು, ಇದೀಗ ದೇಶದ ಮೊದಲ ಕೊರೋನಾ ಲಸಿಕೆ ‘ಕೊವ್ಯಾಕ್ಸಿನ್ ’ ನನ್ನು ಐಸಿಎಂಆರ್ ಮತ್ತು ಭಾರತೀಯ ವೈರಾಲಜಿಯ ಸಹಯೋಗದೊಂದಿಗೆ ಭಾರತ್ ಬಯೋಟೆಕ್ ಲಸಿಕೆ ತಯಾರಿಸಿದೆ.

ಕೊವ್ಯಾಕ್ಸಿನ್ ಲಸಿಕೆಯನ್ನು ರೋಗ ನಿರೋಧಕ ಶಕ್ತಿ ಪ್ರತಿಕ್ರಿಯೆಯ ಪಲಿತಾಂಶಗಳಿಗೆ ಮಾನವ ಕ್ಲಿನಿಕಲ್ ಪ್ರಯೋಗಕ್ಕೆ ಡಿಸಿಜಿಐ ನಿಂದ ಅನುಮತಿ ದೊರಕಿದೆ.

ಈ ಕುರಿತು ಮಾತನಾಡಿದ ಭಾರತ್ ಬಯೋಟೆಕ್ ಕಂಪನಿಯ ಮುಖ್ಯಸ್ಥ ಡಾ. ಕೃಷ್ಣ, ಐಸಿಎಂಆರ್ ಮತ್ತು ಭಾರತೀಯ ವೈರಾಲಜಿಯ ಸಹಯೋಗದೊಂದಿಗೆ ಭರತ್ ಬಯೋಟೆಕ್ ಸಂಸ್ಥೆಯು ಕೊರೋನಾ ಸಾಂಕ್ರಾಮಿಕ ರೋಗಕ್ಕೆ ಲಸಿಕೆ ಕಂಡುಹಿಡಿದಿದ್ದು, ಅದನ್ನು ಹೆಮ್ಮೆಯಿಂದ ಘೋಷಿಸಿದ್ದೇವೆ. ಎಂದು ತಿಳಿಸಿದ್ದಾರೆ.

ಭಾರತ್ ಬಯೋ ಟೆಕ್ ಸಂಸ್ಥೆಯೂ ಈಗಾಗಲೇ ಪೊಲಿಯೋ, ರೇಬೀಸ್, ರೋಟಾ ವೈರಸ್ ನಂತಹ ಅನೇಕ ರೋಗಗಳಿಕೆ ಲಸಿಕೆ ಅಭಿವೃದ್ಧಿ ಪಡೆಸಿ, ದಾಖಲೆ ಬರೆದಿದೆ.

LEAVE A REPLY

Please enter your comment!
Please enter your name here