Thursday, June 30, 2022

Latest Posts

ದಿನಕ್ಕೆ ಒಂದು ಲಕ್ಷ ಸೋಂಕಿತರನ್ನು ನಿರ್ವಹಿಸಲು ಸರ್ಕಾರ ಸಜ್ಜು: ಸಿಎಂ ಅರವಿಂದ್‌ ಕೇಜ್ರಿವಾಲ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ದೆಹಲಿಯಲ್ಲಿ ಮುಂದಿನ ದಿನಗಳಲ್ಲಿ ದಿನಕ್ಕೆ 1 ಲಕ್ಷ ಕೋವಿಡ್‌ ಅಥವಾ ಒಮಿಕ್ರಾನ್‌ ಸೋಂಕಿತರನ್ನು ನಿರ್ವಹಿಸಲು ಸರ್ಕಾರ ಸಜ್ಜಾಗಿದೆ ಎಂದು ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ತಿಳಿಸಿದರು.
ಈ ಬಗ್ಗೆ ಮಾತನಾಡಿದ ಅವರು, ಕೋವಿಡ್‌ ಸೋಂಕಿತರ ಸಂಖ್ಯೆ ಕಡಿಮೆಯಾಗಿದ್ದರೂ ಕೂಡ, ರಾಜ್ಯಾದ್ಯಂತ ಪರೀಕ್ಷೆಗಳನ್ನು ಹೆಚ್ಚಿಸಲಾಗಿದೆ. ಯಾರಿಗಾದರೂ ಸೋಂಕಿನ ಸೂಕ್ಷ್ಮ ಲಕ್ಷಣಗಳಿದ್ದರೂ ಮನೆಯಲ್ಲೇ ಇರಿ, ಆಸ್ಪತ್ರೆಗೆ ದಾಖಲಾಗದೆಯೇ ಆರೋಗ್ಯ ಕಾಪಾಡಿಕೊಳ್ಳಿ ಎಂದು ಮನವಿ ಮಾಡಿದರು.
ಸೌಮ್ಯ ರೋಗ ಲಕ್ಷಣಗಳಿದ್ದರೆ ನಿಮ್ಮ ಮನೆಗೆ ಸೌಕರ್ಯಗಳನ್ನು ನೀಡುತ್ತೇವೆ, ಅಲ್ಲೇ ಚಿಕಿತ್ಸೆ ನೀಡುತ್ತೇವೆ, ಐಸೊಲೇಷನ್‌ ವ್ಯವಸ್ಥೆಯನ್ನೂ ಮಾಡುತ್ತೇವೆ ಎಂದಿದ್ದಾರೆ.
ಪ್ರತಿದಿನ 3 ಲಕ್ಷ ಪರೀಕ್ಷೆಗಳನ್ನು ನಡೆಸಲು ಸಿದ್ಧವಾಗಿದ್ದೇವೆ, ಇಲ್ಲಿಯವರೆಗೆ 60-70 ಸಾವಿರ ಪರೀಕ್ಷೆಗಳ ನಡೆಸುತ್ತಿದ್ದೇವೆ ಎಂದರು. ದೆಹಲಿಯಲ್ಲಿ ಈಗಾಗಲೇ 24 ಒಮಿಕ್ರಾನ್‌ ಪ್ರಕರಣಗಳು ಪತ್ತೆಯಾಗಿವೆ. ಅವುಗಳಲ್ಲಿ 23 ರೋಗಿಗಳು ರೂಪಅಂತರಿಯಿಂದ ಚೇತರಿಸಿಕೊಂಡಿದ್ದಾರೆ ಎಂದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss