ದೇಶದಲ್ಲಿ 3 ಲಕ್ಷ ಗಡಿ ದಾಟಿದ ಕೋವಿಡ್‌ ಪ್ರಕರಣಗಳ ಸಂಖ್ಯೆ: ಪಾಸಿಟಿವಿಟಿ ದರ ಶೇ.16.41ಕ್ಕೆ ಏರಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 3,17,532 ಕೋವಿಡ್‌ ಪ್ರಕರಣ ಪತ್ತೆಯಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ಕೇಂದ್ರ ಆರೋಗ್ಯ ಇಲಾಖೆ, ದೇಶದಲ್ಲಿ 3,17,532 ಮಂದಿಗೆ ಕೋವಿಡ್‌ ತಗುಲಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 3,82,18,773ಕ್ಕೆ ಏರಿಕೆಯಾಗಿದೆ.
ದಿನದ ಪಾಸಿಟಿವಿಟಿ ದರ ಕೂಡ ಶೇ.15.13ರಿಂದ ಶೇ.16.41ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಒಟ್ಟು 19,24,051 ಸಕ್ರಿಯ ಸೋಂಕಿತರಿದ್ದಾರೆ.
ನಿನ್ನೆ 2,23,990 ಮಂದಿ ಕೋವಿಡ್‌ ನಿಂದ ಗುಣಮುಖರಾಗಿದ್ದು, ಒಟ್ಟು 3,58,07,029 ಮಂದಿ ಚೇತರಿಸಿಕೊಂಡಿದ್ದಾರೆ.
ದೇಶದಲ್ಲಿ ಕೋವಿಡ್‌ ರೂಪಾಂತರಿ ಸೋಂಕು ಒಮಿಕ್ರಾನ್‌ ಕೂಡ ಹೆಚ್ಚಾಗುತ್ತಿದ್ದು, ಸೋಂಕಿತರ ಸಂಖ್ಯೆ 9,287ಕ್ಕೆ ಏರಿಕೆಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!