ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, May 9, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

`ಬಜರಂಗಿ ವಾರಿಯರ್‍ಸ್’ನಿಂದ ಕೋವಿಡ್ ಮೃತದೇಹಗಳ ಅಂತ್ಯಸಂಸ್ಕಾರ

ಹೊಸ ದಿಗಂತ ವರದಿ, ಮಂಗಳೂರು:

ಕೊರೋನಾ ಮಹಾಮಾರಿ ಹೆಚ್ಚಾಗುತ್ತಿದ್ದಂತೆ ಸಾವಿನ ಸಂಖ್ಯೆಯಲ್ಲೂ ಹೆಚ್ಚಳವಾಗುತ್ತಿದೆ. ಮಂಗಳೂರಿನಲ್ಲಿ ಕೋವಿಡ್ ಸಂತ್ರಸ್ಥರ ನೆರವಿಗೆ ನಿಂತಿರುವ ಬಜರಂಗದಳ ಕಾರ್ಯಕರ್ತರನ್ನೊಳಗೊಂಡ ‘ಬಜರಂಗಿ ವಾರಿಯರ್‍ಸ್’ ತಂಡ ಕೋವಿಡ್‌ನಿಂದ ಮೃತಪಡುವವರ ಅಂತ್ಯ ಕ್ರಿಯೆಯನ್ನೂ ನಡೆಸುತ್ತಿದೆ.
ನಗರದ ವಿವಿಧ ಆಸ್ಪತ್ರೆಗಳಲ್ಲಿ ನಿಧನರಾದ 5 ಮಂದಿಯ ಮೃತದೇಹಗಳನ್ನು ನಂದಿಗುಡ್ಡೆ ಹಿಂದೂ ರುದ್ರಭೂಮಿಗೆ ಕೊಂಡೊಯ್ದು ಮಂಗಳವಾರ ಹಿಂದೂ ಸಂಪ್ರದಾಯದಂತೆ ನೆರವೇರಿಸಲಾಗಿದೆ.
ಬಜರಂಗಿ ವಾರಿಯರ್‍ಸ್ ತಂಡ ಸಾಕಷ್ಟು ಮಂಜಾಗೃತಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಪಿಪಿಇ ಕಿಟ್‌ಧರಿಸಿಯೇ ಅಂತ್ಯಕ್ರಿಯೆಯನ್ನು ನಡೆಸಲಾಗುತ್ತಿದೆ. ಅನಾಥ ಶವಗಲಿದ್ದರೆ ನಾವೇ ಮುಂದೆ ನಿಂತು ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದ ಬಳಿಕ ಅಂತ್ಯಸಂಸ್ಕಾರ ಮಾಡುತ್ತಿದ್ದೇವೆ ಎಂದು ಬಜರಂಗದಳದ ಜಿಲ್ಲಾ ಸಂಚಾಲಕ ಪುನೀತ್ ಅತ್ತಾವರ ತಿಳಿಸಿದ್ದಾರೆ.
`ಕೋವಿಡ್ ಸೋಂಕಿತರ ನೆರವಿಗೆ ಬಜರಂಗಿ ವಾರಿಯರ್‍ಸ್ ತಂಡ ಸದಾ ಸಿದ್ಧವಿದೆ. ಅಲ್ಲದೆ ರಕ್ತದ ಅವಶ್ಯಕತೆ ಇದ್ದವರು, ತುರ್ತು ಆಂಬ್ಯುಲೆನ್ಸ್ ಸೇವೆಗಾಗಿ, ತುರ್ತು ಔಷಧಿ ಬೇಕಿದ್ದರೆ ಮತ್ತು ಕೋವಿಡ್‌ನಿಂತ ಮೃತಪಟ್ಟವರ ಅಂತ್ಯ ಸಂಸ್ಕಾರ ನಡೆಸಲು ನೆರವು ಬೇಕಿದ್ದರೆ ನಮ್ಮ ವಾರಿಯರ್‍ಸ್‌ಗಳು ಸಿದ್ಧರಾಗಿದ್ದಾರೆ. ಯಾವುದೇ ಸಂದರ್ಭದಲ್ಲೂ ಸಹಾಯವಾಣಿ 8884884549 ಸಂಖ್ಯೆಯನ್ನು ಸಂಪರ್ಕಿಸಬಹುದು’ ಎಂದು ಪುನೀತ್ ಅತ್ತಾವರ ತಿಳಿಸಿದ್ದಾರೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss