ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸ ದಿಗಂತ ವರದಿ, ಕಾಸರಗೋಡು:
ಕೋವಿಡ್ ವೈರಸ್ ಸೋಂಕು ಹೆಚ್ಚಳದ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಪೊಲೀಸ್ ತಂಡದಿಂದ ವಿವಿಧೆಡೆ ಕಟ್ಟುನಿಟ್ಟಿನ ತಪಾಸಣೆ ಆರಂಭಗೊಂಡಿದೆ.
ಕೊರೋನಾ ಖಚಿತತೆ ( ಟಿಪಿಆರ್) ಅಧಿಕಗೊಂಡಿರುವುದರಿಂದ ರಾಜ್ಯ ಸರಕಾರದ ಆದೇಶದ ಪ್ರಕಾರ ಜಿಲ್ಲೆಯಲ್ಲಿ ಮಾನದಂಡಗಳನ್ನು ಇನ್ನಷ್ಟು ಬಿಗಿಗೊಳಿಸುವ ಪ್ರಕ್ರಿಯೆಯ ಅಂಗವಾಗಿ ಈ ಕ್ರಮ ಜಾರಿಗೊಳಿಸಲಾಗುತ್ತಿದೆ. ಅಗತ್ಯವಿಲ್ಲದೆ ಮನೆಗಳಿಂದ ಹೊರಬಂದು ಅಡ್ಡಾಡುವವರನ್ನು ತಡೆಯುವ, ನಿಗದಿಪಡಿಸಲಾದ ಅವಧಿಗಿಂತ ಅಧಿಕ ಸಮಯ ತೆರೆದು ಕಾರ್ಯಾಚರಿಸುವ ಅಂಗಡಿಗಳನ್ನು ಮುಚ್ಚಿಸುವ ಕ್ರಮಗಳನ್ನು ಪೊಲೀಸರು ಕೈಗೊಳ್ಳುತ್ತಿದ್ದಾರೆ.
ಈ ಕಾರ್ಯಾಚರಣೆಯ ಅಂಗವಾಗಿ ಕಾಸರಗೋಡು ಡಿವೈಎಸ್ ಪಿ ಪಿ.ಬಾಲಕೃಷ್ಣನ್ ನಾಯರ್ ಅವರ ನೇತೃತ್ವದಲ್ಲಿ ಮಂಜೇಶ್ವರ, ಕುಂಬಳೆ, ಕಾಸರಗೋಡು, ವಿದ್ಯಾನಗರ, ಬದಿಯಡ್ಕ ಸಿಐಗಳು ಸಹಿತ ಪೊಲೀಸರ ತಂಡವು ತಪಾಸಣೆ ನಡೆಸುತ್ತಿದೆ. ಆದೇಶ ಉಲ್ಲಂಘನೆ ಸಂಬಂಧ ಅನೇಕ ಕೇಸುಗಳನ್ನು ಈಗಾಗಲೇ ದಾಖಲಿಸಲಾಗಿದೆ. ಕೋವಿಡ್ ಕಟ್ಟುನಿಟ್ಟು ಉಲ್ಲಂಘನೆ, ಮಾಸ್ಕ್ ಧರಿಸದೇ ಸಂಚರಿಸಿದ ಪ್ರಕರಣಗಳಿಗೆ ಸಂಬಂಧಿಸಿ 450 ಕೇಸುಗಳನ್ನು ದಾಖಲಿಸಲಾಗಿದ್ದು , 7500 ಮಂದಿಗೆ ಎಚ್ಚರಿಕೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಪೊಲೀಸರಿಂದ ಇನ್ನಷ್ಟು ಕಠಿಣ ವ್ಯವಸ್ಥೆಗಳು ಮುಂದುವರಿಯಲಿವೆ.