ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..
ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಮನುಷ್ಯರನ್ನು ಆಹುತಿಪಡೆದ ಮಹಾಮಾರಿ ಕೊರೋನಾ ಪ್ರಾಣಿಗಳ ಮೇಲೂ ಕೆಂಗಣ್ಣು ಬೀರಿದೆ.
ಹೌದು.. ಅಂಟ್ಲಾಂಟಾ ಮೃಗಾಲಯದ ಕೆಲವು ಗೊರಿಲ್ಲಾಗಳಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ.
“ಕೆಲವು ಗೊರಿಲ್ಲಾಗಳಲ್ಲಿ ನೆಗಡಿ, ಕೆಮ್ಮು ಮುಂತಾದ ಕೊರೋನಾ ಲಕ್ಷಣಗಳು ಕಂಡುಬಂದಿದ್ದು, ಹೀಗಾಗಿ ಆ ಗೋರಿಲ್ಲಾಗಳ ಮಲ, ಮೂಗಿನ ಮತ್ತು ಗಂಟಲಿನ ದ್ರವದ ಮಾದರಿಯನ್ನು ಸಂಗ್ರಹಿಸಿ ಜಾರ್ಜಿಯಾ ವಿಶ್ವವಿದ್ಯಾಲಯಕ್ಕೆ ಪರೀಕ್ಷೆಗೆ ಕಳುಹಿಸಲಾಗಿತ್ತು. ಪರೀಕ್ಷೆ ವರದಿಯಲ್ಲಿ ಗೊರಿಲ್ಲಾಗಳಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ” ಎಂದು ಅಟ್ಲಾಂಟಾ ಮೃಗಾಲಯ ಹೇಳಿಕೆ ಬಿಡುಗಡೆ ಮಾಡಿದೆ.
ಎಷ್ಟು ಗೊರಿಲ್ಲಾಗಳಿಗೆ ಸೋಂಕು ತಗುಲಿದೆ ಎಂಬ ಬಗ್ಗೆ ಮೃಗಾಲಯ ನಿಖರ ಮಾಹಿತಿ ನೀಡಿಲ್ಲ. ಆದರೆ ಸುಮಾರು 13 ಗೊರಿಲ್ಲಾಗಳಿಗೆ ಸೋಂಕು ತಗುಲಿದೆ ಎಂದು ವರದಿಯಾಗಿದೆ