Wednesday, August 17, 2022

Latest Posts

ಕೋವಿಡ್ ಬೃಹತ್ ಲಸಿಕಾ ಮೇಳ: ಮಂಡ್ಯದಲ್ಲಿ ಶೇ. 100ರಷ್ಟು ಲಸಿಕೆ

ಹೊಸ ದಿಗಂತ ವರದಿ, ಮಂಡ್ಯ :

ಪ್ರಧಾನಿ ನರೇಂದ್ರಮೋದಿಯವರ ಹುಟ್ಟುಹಬ್ಬದ ಅಂಗವಾಗಿ ದೇಶಾದ್ಯಂತ ಶುಕ್ರವಾರ ಕೋವಿಡ್ ಬೃಹತ್ ಮೇಳ ಹಮ್ಮಿಕೊಳ್ಳಲಾಗಿತ್ತು. ಜಿಲ್ಲೆಯಲ್ಲಿ 1.25 ಲಕ್ಷ ಲಸಿಕೆ ಹಾಕುವ ಮೂಲಕ ಗುರಿ ಸಾಧಿಸಲಾಗಿದೆ.
ಬೆಳಗ್ಗೆ 8.30ಕ್ಕೆ ಗಂಟೆಗೆ ಆರಂಭವಾದ ಲಸಿಕಾ ಕಾರ‌್ಯಕ್ರಮ ಸಂಜೆ 5 ಗಂಟೆಯವರೆಗೂ ನಿರಂತರವಾಗಿ ನಡೆಯಿತು. ರಾಜ್ಯ ಸರ್ಕಾರ ನೀಡಿದ್ದ ಲಸಿಕಾ ಗುರಿಯನ್ನು ಶೇ.100ರಷ್ಟು ಸಾಧಿಸಲಾಗಿದೆ.
ರಾಜ್ಯ ಸರ್ಕಾರ 1.25 ಲಕ್ಷ ಲಸಿಕೆ ಹಾಕುವ ಗುರಿ ನೀಡಿದ್ದು, ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟಂಬ ಕಲ್ಯಾಣ ಇಲಾಖೆ ವತಿಯಿಂದ 1,15,355 ಲಸಿಕೆಗಳನ್ನು ಹಾಕುವ ಮೂಲಕ ಶೇ. 100ಕ್ಕಿಂತಲೂ ಹೆಚ್ಚಿನ ಗುರಿ ಸಾಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೆ.ಆರ್. ಪೇಟೆಯಲ್ಲಿ 16500 ಲಸಿಕೆ ಹಾಕುವ ಗುರಿ ಹೊಂದಿದ್ದು,, 16320 ಲಸಿಕೆಗಳನ್ನು ಹಾಕುವ ಮೂಲಕ ಶೇ. 99ರಷ್ಟು ಗುರಿ ಸಾಧಿಸಿದ್ದರೆ, ಮದ್ದೂರಿನಲ್ಲಿ 20ಸಾವಿರ ಲಸಿಕಾ ಗುರಿ ಇತ್ತು. 20,790 ಲಸಿಕೆಗಳನ್ನು ಹಾಕುವ ಮೂಲಕ ಶೇ. 104ರಷ್ಟು ಗುರಿ ಸಾಧಿಸಲಾಗಿದೆ. ಮಳವಳ್ಳಿಯಲ್ಲಿ 16500 ಲಸಿಕೆ ಹಾಕಬೇಕಿದ್ದು, ಈ ಪೈಕಿ 16358 ಲಸಿಕೆಗಳನ್ನು ಹಾಕಿ ಶೇ. 99ರಷ್ಟು ಗುರಿ ಸಾಧಿಸಿದೆ. ಮಂಡ್ಯದಲ್ಲಿ 24000 ಲಸಿಕೆ ಹಾಕಬೇಕಿದ್ದುಘಿ, ಈ ಪೈಕಿ 24509 ಮಂದಿಗೆ ಲಸಿಕೆ ಹಾಕುವ ಮೂಲಕ ಶೇ. 102ರಷ್ಟು ಸಾಧನೆ ಮಾಡಲಾಗಿದೆ.
ನಾಗಮಂಗಲದಲ್ಲಿ 17000 ಗುರಿ ಹೊಂದಿದ್ದು, 16977 ಲಸಿಕೆ ಹಾಕಿ ಶೇ. 100ರಷ್ಟು ಗುರಿ ಸಾದಿಸಿದೆ. ಪಾಂಡವಪುರ 17 ಸಾವಿರ ಲಸಿಕಾ ಗುರಿ ಹೊಂದಿದ್ದು, ಈ ಪೈಕಿ 16873 ಲಸಿಕೆ ಹಾಕಿದೆ. ಶೇ. 99ರಷ್ಟು ಗುರಿ ಸಾಧಿಸಿದೆ. ಶ್ರೀರಂಗಪಟ್ಟಣದಲ್ಲಿ 14 ಸಾವಿರ ಲಸಿಕಾ ಗುರಿ ಹೊಂದಿದು, ಈ ಪೈಕಿ 13528 ಲಸಿಕೆ ಹಾಕಿ ಶೇ. 97ರಷ್ಟು ಗುರಿ ಸಾಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!