ಚೀನಾದಲ್ಲಿ ಕೋವಿಡ್‌ ತಾಂಡವ: ದಿನಕ್ಕೆ 9000 ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಚೀನಾದಲ್ಲಿ ಕೋವಿಡ್‌ ತಾಂಡವ ದಿನೇ ದಿನೇ ಹೆಚ್ಚಾಗುತ್ತಿದ್ದು ಪರಿಸ್ಥಿತಿ ನಿಭಾಯಿಸಲಾಗದೇ ಚೀನಾ ಸರ್ಕಾರ ಹೆಣಗಾಡುತ್ತಿದೆ. ಚೀನಾ ತನ್ನ ದೈನಂದಿನ ಕೋವಿಡ್‌ ಪ್ರಕರಣಗಳನ್ನು ವರದಿ ಮಾಡುವುದು ನಿಲ್ಲಿಸಿದ್ದು ವಿಶ್ವ ಅರೋಗ್ಯ ಸಂಸ್ಥೆಯು ಕೋವಿಡ್ ಪ್ರಕರಣಗಳ ಸಂಖ್ಯೆಯ ವರದಿ ನೀಡುವಂತೆ ಕೇಳಿದೆ. ಇತ್ತೀಚಿನ ವರದಿಯೊಂದರ ಪ್ರಕಾರ ಚೀನಾದಲ್ಲಿ ಕೋವಿಡ್‌ ಹೊಸ ರೂಪಾಂತರಿಯಿಂದ ಸಾವುಗಳ ಸಂಖ್ಯೆಯಲ್ಲಿ ಏರಿಕೆಯಾಗಿದ್ದು ದಿನಕ್ಕೆ 9000ದಷ್ಟು ಸಂಖ್ಯೆಯಲ್ಲಿ ಸಾವುಗಳಾಗುತ್ತಿವೆ ಎಂದು ಅಂದಾಜಿಸಲಾಗಿದೆ.

ಕೋವಿಡ್ ನೀತಿಯನ್ನು ರದ್ದುಗೊಳಿಸಲು ನಿರ್ಧರಿಸಿದಾಗಿನಿಂದ ಚೀನಾದಲ್ಲಿ ಪ್ರತಿದಿನ ಸುಮಾರು 9,000 ಜನರು ಕೋವಿಡ್‌ನಿಂದ ಸಾಯುತ್ತಿದ್ದಾರೆ ಎಂದು ಯುಕೆ ಮೂಲದ ಆರೋಗ್ಯ ದತ್ತಾಂಶ ಸಂಸ್ಥೆಯೊಂದು ಅಂದಾಜಿಸಿದೆ. ಆರೋಗ್ಯ ಸಂಸ್ಥೆಯ ಅಂದಾಜಿನ ಪ್ರಕಾರ, ಡಿಸೆಂಬರ್‌ನಲ್ಲಿ ಚೀನಾದಲ್ಲಿ ಕೋವಿಡ್‌ಗೆ ಸಂಬಂಧಿಸಿದ ಒಟ್ಟು ಸಾವುಗಳ ಸಂಖ್ಯೆ 1 ಮಿಲಿಯನ್‌ ಗೆ ತಲುಪಬಹುದು ಎನ್ನಲಾಗಿದೆ. ಕನಿಷ್ಠ 18.6 ಮಿಲಿಯನ್ ಪ್ರಕರಣಗಳು ಸಕ್ರಿಯವಾಗಿದೆ ಎಂದೂ ಯುಕೆ ಮೂಲದ ಸಂಸ್ಥೆ ಅಂದಾಜಿಸಿದೆ.
ಜನವರಿ ಮಧ್ಯದ ವೇಳೆಗೆ, ಒಂದು ದಿನದಲ್ಲಿ 3.7 ಮಿಲಿಯನ್ ಕೋವಿಡ್ ಪ್ರಕರಣಗಳು ಪತ್ತಯಾಗಬಹುದು ಎನ್ನಲಾಗಿದ್ದು ಜನವರಿ 23 ರ ವೇಳೆಗೆ, ಚೀನಾದಲ್ಲಿ ಒಟ್ಟು 5,84,000 ಸಾವುಗಳು ಸಂಭವಿಸಬಹುದು ಎನ್ನಲಾಗಿದೆ. ಆದರೆ ಚೀನಾ ವರದಿ ಮಾತ್ರ ಡಿ.30ರಂದು ಒಂದು ಸಾವು ಸಂಭವಿಸಿದೆ ಎಂದು ವರದಿ ಮಾಡಿದೆ.

ಕೋವಿಡ್ ಡೇಟಾದ ಬಗ್ಗೆ ಟೀಕೆಗಳ ನಡುವೆ, ಚೀನಾದ ಅಧಿಕಾರಿಗಳು ಕೋವಿಡ್ ಪರಿಸ್ಥಿತಿಯನ್ನು ಚರ್ಚಿಸಲು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ.

ಆನ್‌ಲೈನ್ ಸಭೆಯಲ್ಲಿ, ವಿಶ್ವ ಆರೋಗ್ಯ ಸಂಸ್ಥೆಯು ಜೀನೋಮ್‌ ಸೀಕ್ವೆನ್ಸಿಂಗ್, ಆಸ್ಪತ್ರೆಗೆ ದಾಖಲಾಗಿರುವವರ ಸಂಖ್ಯೆ, ಸಾವುಗಳು ಮತ್ತು ವ್ಯಾಕ್ಸಿನೇಷನ್‌ಗಳ ಕುರಿತು ಹೆಚ್ಚಿನ ಡೇಟಾವನ್ನು ಒದಗಿಸುವಂತೆ ಚೀನಾವನ್ನು ಒತ್ತಾಯಿಸಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!