Wednesday, August 17, 2022

Latest Posts

ಮನೆಯಿಂದ ಹೊರಬಂದ ಕೊರೋನಾ ಸೋಂಕಿತನಿಗೆ ಕಲ್ಲಿನಿಂದ ಹೊಡೆದರು

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ವರದಿ, ಮೈಸೂರು:

ಹೋಂ ಕ್ವಾರಂಟೈನ್ ಆಗಿದ್ದ ಕೋವಿಡ್ ಸೋಂಕಿತ ವ್ಯಕ್ತಿಯ ಮೇಲೆ, ಕೆಲವರು ಕಲ್ಲಿನಿಂದ ಹಲ್ಲೆ ನಡೆಸಿರುವ ಘಟನೆ ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲ್ಲೂಕಿನ ಕಾರಪುರ ಗ್ರಾಮದಲ್ಲಿ ನಡೆದಿದೆ.
ಹೋಂ ಕ್ವಾರಂಟೈನ್ ಆಗಿದ್ದ ಕೋವಿಡ್ ಸೋಂಕಿತ ಮನೆಯಿಂದ ಹೊರ ಬಂದಿದ್ದಾರೆ.
ಮನೆಯಿಂದ ಹೊರಬಂದು ಗ್ರಾಮದವರಿಗೆಲ್ಲಾ ಕೊರೋನಾ ಸೋಂಕು ಅಂಟಿಸಲು ಯತ್ನಿಸುತ್ತಿದ್ದಾನೆ ಎಂದು ಆಕ್ರೋಶದಿಂದ ಕೆಲವರು ಸೋಂಕಿತನಿಗೆ ಕಲ್ಲಿನಿಂದ ಹೊಡೆದು, ಮನೆಯೊಳಗೆ ಇರಬೇಕೆಂದು ತಾಕೀತು ಮಾಡಿ, ಹೊರಬಂದಿದ್ದಕ್ಕೆ ಕಿಡಿಕಾರಿದ್ದಾರೆ. ಕಲ್ಲೇಟಿನಿಂದ ಗಂಭೀರವಾಗಿ ಗಾಯಗೊಂಡ ಕೋವಿಡ್ ಸೋಂಕಿತನನ್ನು ಆಂಬುಲೆನ್ಸ್ ಮೂಲಕ ಎಚ್.ಡಿ ಕೋಟೆ ಪಟ್ಟಣ ಆಸ್ಪತ್ರೆಗೆ ಕರೆತಂದು ದಾಖಲಿಸಲಾಗಿದೆ. ಕಾರಪುರ ಗ್ರಾಮದ ಮುತ್ತಯ್ಯ, ದಾಸೇಗೌಡ, ಬಲರಾಮ ಎಂಬವರಿoದ ಹಲ್ಲೆ ನಡೆದಿದೆ ಎನ್ನಲಾಗಿದ್ದು, ಈ ಘಟನೆ ಕುರಿತು ಯಾವುದೇ ಪ್ರಕರಣ ದಾಖಲಾಗಿಲ್ಲ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!