ಕೋವಿಡ್‌ಗೆ ಮತ್ತೆ ಕೋಪ: 24 ತಾಸುಗಳಲ್ಲಿ 334 ಹೊಸಾ ಕೇಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಳೆದ 24 ಗಂಟೆಗಳಲ್ಲಿ 334 ಹೊಸ ಸೋಂಕಿನ ಪ್ರಕರಣ ದಾಖಲಿಸುವ ಮೂಲಕ ಕೋವಿಡ್ ದೇಶದಲ್ಲಿ ಮತ್ತೆ ಹೆಡೆಯೆತ್ತಿದೆ.
ಇಷ್ಟೊಂದು ಪ್ರಕರಣಗಳು ಒಂದೇ ಬಾರಿ ಪತ್ತೆಯಾಗುತ್ತಿರುವುದು ಕಳೆದ 97 ದಿನಗಳ ಬಳಿಕ ಇದೇ ಮೊದಲಾಗಿದೆ.
ಈ ಬಗ್ಗೆ ಕೇಂದ್ರ ಆರೋಗ್ಯ ಇಲಾಖೆ ಅಂಕಿ ಅಂಶ ಬಿಡುಗಡೆ ಮಾಡಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ ದೇಶಾದ್ಯಂತ 334 ಹೊಸ ಸೋಂಕು ಪ್ರಕರಣಗಳು ವರದಿಯಾಗಿವೆ. ಆ ಮೂಲಕ ದೇಶದಲ್ಲಿನ ಸಕ್ರಿಯ ಪ್ರಕರಣಗಳ ಸಂಖ್ಯೆ 2,686ಕ್ಕೆ ಏರಿಕೆಯಾಗಿದೆ ಎಂದು ಹೇಳಿದೆ. ಈ ಅವಧಿಯಲ್ಲಿ ಕೋವಿಡ್ ಸಂಬಂಧ ಮೂರು ಸಾವುಗಳು ಉಂಟಾಗಿದೆ.
ದೇಶದಲ್ಲಿ ಸದ್ಯ ಸೋಂಕಿತರ ಸಂಖ್ಯೆ 4,46,87,496

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!