Wednesday, June 29, 2022

Latest Posts

covid rapid test kit ಬಳಕೆಗೆ ಐಸಿಎಂಆರ್ ಬ್ರೇಕ್ !

ಹೊಸದಿಲ್ಲಿ : ಕೊರೋನಾ ರ್‍ಯಾಪಿಡ್ ಟೆಸ್ಟ್ ಕಿಟ್‌ಗಳನ್ನು ಸದ್ಯ ಬಳಸದಂತೆ ಎಲ್ಲ ರಾಜ್ಯಗಳಿಗೆ ಐಸಿಎಂಆರ್ ಮನವಿ ಮಾಡಿದೆ.
ಕೇಂದ್ರದಿಂದ ರವಾನೆಯಾಗಿರುವ ಕಿಟ್‌ಗಳ ಗುಣಮಟ್ಟದಲ್ಲಿ ಸಂದೇಹ ಉಂಟಾಗಿದ್ದು, ಎರಡು ದಿನಗಳ ಮಟ್ಟಿಗೆ ಇವುಗಳನ್ನು ಬಳಸುವುದು ಬೇಡವೆಂದು ಭಾರತೀಯ ವೈದ್ಯ ಸಂಶೋಧನೆ ಮಂಡಳಿ ಮುಖ್ಯಸ್ಥ ರಮಣ್ ಗಂಗೇಡ್ಕರ್ ಹೇಳಿದ್ದಾರೆ. ಈ ಸಂಬಂಧ ಎಲ್ಲ ರಾಜ್ಯ ಸರ್ಕಾರಗಳ ಮುಖ್ಯ ಕಾರ್ಯದರ್ಶಿಗಳಿಗೂ ಕೇಂದ್ರ ಆರೋಗ್ಯ ಇಲಾಖೆ ಅಧಿಕೃತ ಸೂಚನೆ ಜಾರಿ ಮಾಡಲಿದೆ.
ಚೀನಾದಿಂದಲೂ ಕಿಟ್ ರವಾನೆಯಾಗಿದ್ದು ಇವುಗಳ ಗುಣಮಟ್ಟದ ಬಗ್ಗೆ ರಾಜಸ್ಥಾನ ಸರ್ಕಾರ ಅನುಮಾನ ವ್ಯಕ್ತಪಡಿಸಿ ಕೇಂದ್ರ ಆರೋಗ್ಯ ಇಲಾಖೆಗೆ ಅಹವಾಲು ಸಲ್ಲಿಸಿದೆ,

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss