spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, September 19, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಕೋವಿಡ್ ಮೂರನೇ ಅಲೆ ತಡೆಗೆ ಕ್ರಮ: ಡಿಎಸ್. ಡಾ.ರವಿಕುಮಾರ್

- Advertisement -Nitte

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………

ಹೊಸ ದಿಗಂತ ವರದಿ, ಕೋಲಾರ:

ಕೋವಿಡ್ ಮೂರನೇ ಅಲೆ ಮಕ್ಕಳನ್ನು ಬಾಧಿಸಲಿದೆ ಎಂಬ ತಜ್ಞರ ವರದಿ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆಯಲ್ಲಿ ಮಕ್ಕಳ ಐಸಿಯು ಬೆಡ್, ಆಕ್ಸಿಜನ್ ಹಾಸಿಗೆ ವಾರ್ಡ್ ಸಿದ್ದಪಡಿಸಿಕೊಂಡಿದ್ದು, ನುರಿತ ವೈದ್ಯರ ತಂಡ ನಿಯೋಜಿಸಲಾಗಿದೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ರವಿಕುಮಾರ್ ತಿಳಿಸಿದರು.
ಶುಕ್ರವಾರ ಸುದ್ದಿಗಾರರ ಜತೆ ಶುಕ್ರವಾರ ಮಾತನಾಡಿದ ಅವರು, ನುರಿತ ವೈದ್ಯರ ತಂಡದಲ್ಲಿ ಡಾ. ಬಾಲಸುಂದರ್ ಮುಖ್ಯಸ್ಥರಾಗಿರುತ್ತಾರೆ, ಡಾ. ಶ್ರೀನಾಥ್, ಡಾ. ವಿನಯ್, ಮಹೇಶ್ ಹಾಗೂ ಅನಸ್ತೇಷಿಯಾ ವೈದ್ಯರನ್ನೊಳಗೊಂಡ ತಂಡವನ್ನು ವ್ಯವಸ್ಥಿತವಾಗಿ ಸಿದ್ದಪಡಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಕರೊನಾ ಎರಡನೇ ಅಲೆ ನಿಯಂತ್ರಣಕ್ಕೆ ಬಂದಿದ್ದು, ಸ್ವೇಚ್ಛಾಚಾರದಿಂದ ತಿರುಗಾಡುವುದು ಕಡಿಮೆ ಮಾಡಿ ಕರೊನಾ ಮಾರ್ಗಸೂಚಿಗಳನ್ನು ಪಾಲಿಸುವ ಮೂಲಕ ಸೋಂಕು ಹರಡುವುದನ್ನು ನಿಯಂತ್ರಿಸಬಹುದು ಎಂದು ತಿಳಿಸಿದರು.
ಮಾರ್ಚ್ 2ನೇ ವಾರದಲ್ಲಿ ಕಾಣಿಸಿಕೊಂಡ ಕರೊನಾ ಎರಡನೇ ಅಲೆಯಲ್ಲಿ ಸೋಂಕಿನ ರೋಗಾಣು ತೀವ್ರ ರೋಗಕಾರಕವಾಗಿತ್ತು.
ಕರೊನಾ ನಿಯಮಾವಳಿ ಪಾಲಿಸುವಲ್ಲಿ ಜನರ ನಿರ್ಲಕ್ಷ್ಯದಿಂದ ಕಡಿಮೆ ಆಗುತ್ತಿದ್ದ ಸೋಂಕಿನ ಸಂಖ್ಯೆ ದಿಢಿರ್ ಉಲ್ಬಣಿಸಿದ್ದರಿಂದ ದುಷ್ಪರಿಣಾಮ ಎದುರಿಸುವಂತಾಯಿತು. ಜಿಲ್ಲೆಯಲ್ಲಿ ಕ್ಷಿಪ್ರ ಕಾರ್ಯೋನ್ಮುಖರಾಗಿದ್ದರಿಂದ  ಕಳೆದ 10 ದಿನಗಳಿಂದೀಚೆಗೆ ರೋಗಿಗಳ ಸಂಖ್ಯೆ ಕಡಿಮೆ, ಸಾವು ಪ್ರಮಾಣ ಕಡಿಮೆ ಆಗುತ್ತಿದೆ ಎಂದರು.
ಸೋಂಕು ಇಳಿಮುಖವಾಗುತ್ತಿದೆ ಎಂದು ಸ್ವೇಚ್ಛಾಚಾರದಿಂದ ತಿರುಗಾಡುವುದನ್ನು ಕಡಿಮೆ ಮಾಡಿ,  ಸಾಮಾಜಿಕ ಅಂತರ ಕಾಪಾಡಿ, ಮಾಸ್ಕ್ ಧರಿಸಿಕೊಂಡು ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಂಡರೆ ರೋಗ ಬರುವುದು ಹರಡುವುನ್ನು ತಡೆಯಬಹುದು.
ನೀವು ಸರರಕ್ಷಿತವಾಗಿರಿ, ಬೇರೆಯವರು ಸುರಕ್ಷಿತವಾಗಿರಲು ಸಹಕರಿಸಿ, 18 ವರ್ಷ ಮೇಲ್ಪಟ್ಟವರು ತಪ್ಪು ತಿಳುವಳಿಕೆಯಿಂದ ಹೊರಬಂದು ಲಸಿಕೆ ಪಡೆದು ಸೋಂಕಿನಿಂದ ದೂರ ಇರಿ ಎಂದು ನುಡಿದರು.
ಜಿಲ್ಲಾಸ್ಪತ್ರೆಯಲ್ಲಿ ಕರೊನಾ ನಿಯಂತ್ರಿಸುವ ಸಲುವಾಗಿ 250 ಆಕ್ಸಿಜನ್ ಹಾಸಿಗೆಯನ್ನು ಸಿದ್ದಪಡಿಸಿದ್ದೆವು. ಈಗ 100ಕ್ಕಿಂತ ಹೆಚ್ಚು ಹಾಸಿಗೆ ಖಾಲಿ ಇದೆ. ಐಸಿಯು ವಾರ್ಡ್ ಮಾತ್ರ ತುಂಬಿದ್ದು, ಕರೊನಾ ತೀವ್ರ ತರವಾದ ರೋಗಲಕ್ಷಣ ಹೊಂದಿದ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದಂತೆ ಸಾಮಾನ್ಯ ವಾರ್ಡ್‌ಗಳು ಶೇ 50ರಷ್ಟು ಖಾಲಿ ಇದೆ ಎಂದು ನುಡಿದರು.
ಹಳೆಯ ಸಾವಿನ ಪ್ರಮಾಣ ಪತ್ರವನ್ನು ಈಗ ಸಿದ್ದಪಡಿಸುತ್ತಿರುವ ಬಗ್ಗೆ ವ್ಯಕ್ತವಾದ ಆರೋಪವನ್ನು ನಿರಾಕರಿಸಿದ ಜಿಲ್ಲಾ ಸರ್ಜನ್ ಜಿಲ್ಲಾಸ್ಪತ್ರೆಯಲ್ಲಿನ ಕರೊನಾ ಸೋಂಕಿತರ ಸಂಖ್ಯೆ, ಗುಣಮುಖ, ಸಾವು ಪ್ರಕರಣಗಳನ್ನು ಪ್ರತಿ ದಿನ ವರದಿ ನೀಡಲಾಗುತ್ತದೆ ಎಂದು ಹೇಳಿದರು.
ಖಾಸಗಿ ಅಂಬುಲೆನ್ಸ್‌ಗಳು ಆಸ್ಪತ್ರೆ ಆವರಣದಲ್ಲಿ ನಿಲ್ಲಿಸದಂತೆ, ರಸ್ತೆ ಬದಿಗೆ ನಿಲ್ಲಿಸಿಕೊಳ್ಳಿ, ಓಡಾಟಕ್ಕೆ ಅಡ್ಡಿಯಾಗುತ್ತಿರುವ ಬಗ್ಗೆ ಸಾಕಷ್ಟು ಬಾರಿ ಎಚ್ಚರಿಕೆ ನೀಡಲಾಗಿದೆ, ಪೊಲೀಸರ ಗಮನಕ್ಕೆ ತಂದಿದ್ದರೂ ಕ್ಯಾರೇ ಮಾಡುತ್ತಿಲ್ಲ ಎಂದು ಅಸಹಾಯತೆ ವ್ಯಕ್ತಪಡಿಸಿದರು.
ಜಿಲ್ಲಾಸ್ಪತ್ರೆಯಲ್ಲೇ ಶವ ಸಾಗಿಸಲು ವಾಹನ ಇರುವುದರಿಂದ ಆಸ್ಪತ್ರೆಯಲ್ಲಿ ಮೃತಪಟ್ಟ ಕರೊನಾ ಸೋಂಕಿತರ ಶವಗಳನ್ನು ವಾಹನದಲ್ಲಿ ಉಚಿತವಾಗಿ ಕಳುಹಿಸಿಕೊಡಲಾಗುತ್ತುದೆ. ಖಾಸಗಿ ಆಸ್ಪತ್ರೆಗಳ ಅಂಬುಲೆನ್ಸ್‌ಗಳು ಹಣ ಸುಲಿಗೆ ಮಾಡುತ್ತಿರುವ ಬಗ್ಗೆ ಮಾಹಿತಿ ಇಲ್ಲ ಎಂದು ನುಡಿದರು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss