COVID UPDATES | ಬಿಎಫ್7 ಭೀತಿ: ಮಂಗಳೂರು ಏರ್‌ಪೋರ್ಟ್‌ನಲ್ಲಿ ತಪಾಸಣೆ ಶುರು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಾಗತಿಕವಾಗಿ ಆತಂಕ ಹುಟ್ಟಿಸಿರುವ ಕೋವಿಡ್ ರೂಪಾಂತರಿ ಒಮಿಕ್ರೋನ್‌ನ ಉಪತಳಿ ಬಿಎಫ್7 ಯಾವ ಕಾರಣಕ್ಕೂ ದಕ್ಷಿಣ ಕನ್ನಡ ಜಿಲ್ಲೆಯ ಒಳಗೆ ಕಾಲಿಡದಂತೆ ಕಣ್ಗಾವಲು ಬಿಗಿಗೊಂಡಿದೆ.

ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೂಕ್ತ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇಲ್ಲಿ ಶನಿವಾರ ಪ್ರತ್ಯೇಕ ತಪಾಸಣಾ ಕೇಂದ್ರ ತೆರೆಯಲಾಗಿದ್ದು, ಬರುವ ಪ್ರಯಾಣಿಕರನ್ನು ತಪಾಸಣೆಗೊಳಪಡಿಸಲು ಆದ್ಯತೆ ನೀಡಲಾಗಿದೆ.
ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರ ಇಲ್ಲಿ ತಪಾಸಣಾ ಕೇಂದ್ರ ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

ಹೇಗೆ ನಡೆಯಲಿದೆ ತಪಾಸಣೆ?

ಇಮಿಗ್ರೆಷನ್ ತಪಾಸಣೆಗೂ ಮುನ್ನ ಈ ಕೇಂದ್ರದಲ್ಲಿ ಪ್ರಯಾಣಿಕರ ಸ್ವಾಬ್ ಸ್ಯಾಂಪಲ್ ಸಂಗ್ರಹಿಸಿ ಪರೀಕ್ಷೆ ನಡೆಸಲಾಗುತ್ತದೆ. ಇದಕ್ಕಾಗಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಪರೀಕ್ಷೆ ಫಲಿತಾಂಶದ ಡಿಜಿಟಲ್ ಪ್ರತಿ ತ್ವರಿತವಾಗಿ ನೇರವಾಗಿ ಆಯಾ ಪ್ರಯಾಣಿಕರ ಕೈ ಸೇರುವಂತೆ ವ್ಯವಸ್ಥೆ ಮಾಡಲಾಗಿದೆ. ವಿಮಾನಯಾನ ಸಂಸ್ಥೆ ಆಯ್ಕೆ ಮಾಡುವ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಇಲ್ಲಿ ಉಚಿತವಾಗಿಯೇ ತಪಾಸಣೆ ನಡೆಸಲಾಗುತ್ತದೆ. ವಿಮಾನಯಾನಿಗಳಿಗೆ ಸ್ಯಾನಿಟೈಸ್ ಹಾಗೂ ಮಾಸ್ಕ್‌ನ್ನು ಕಡ್ಡಾಯಗೊಳಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!