ಕೋವಿಡ್ ವ್ಯಾಕ್ಸಿನೇಶನ್ ಸಾಧನೆ: ಭಾರತಕ್ಕೆ ಬಿಲ್ ಗೆಟ್ಸ್ ಬಹುಪರಾಕ್!!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕೋವಿಡ್ ವಿರುದ್ಧದ ಭಾರತದ ಲಸಿಕೆ ಅಭಿಯಾನ 200 ಕೋಟಿ ಮೈಲುಗಲ್ಲು ಸಾಧನೆಗಾಗಿ ಪ್ರಧಾನಿ ನರೇಂದ್ರ‌ ಮೋದಿ ಅವರಿಗೆ ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಅಭಿನಂದಿಸಿದ್ದಾರೆ.

ʻ200 ಕೋಟಿ ಲಸಿಕೆ ನೀಡುವ ಮತ್ತೊಂದು ಮೈಲಿಗಲ್ಲನ್ನು ತಲುಪಿದ ನರೇಂದ್ರ ಮೋದಿ ಅವರಿಗೆ ಅಭಿನಂದನೆಗಳು. ಕೋವಿಡ್-19 ತೀವ್ರತೆ ತಗ್ಗಿಸಲು ಭಾರತೀಯ ಲಸಿಕೆ ತಯಾರಕರು, ಭಾರತ ಸರ್ಕಾರದೊಂದಿಗೆ ನಿಮ್ಮ ನಿರಂತರ ಪಾಲುದಾರಿಕೆಗಾಗಿ ನಾವು ಕೃತಜ್ಞರಾಗಿರುತ್ತೇವೆ’ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಭಾನುವಾರವಷ್ಟೇ ಪ್ರಧಾನಿ ಮೋದಿ ಮಾತನಾಡಿ, ವಿಶ್ವದ ಅತಿದೊಡ್ಡ ಕೋವಿಡ್-19 ಲಸಿಕೆ ಡ್ರೈವ್ ಅನ್ನು 18 ತಿಂಗಳ ಹಿಂದೆ ಭಾರತ ಪ್ರಾರಂಭಿಸಿ ಕಳೆದ ಭಾನುವಾರ 200 ಕೋಟಿ ವ್ಯಾಕ್ಸಿನೇಷನ್ ಡೋಸ್‌ಗಳನ್ನು ನಿರ್ವಹಿಸುವ ಮೈಲಿಗಲ್ಲು ಸ್ಥಾಪಿಸಿ ಇತಿಹಾಸ ಸೃಷ್ಟಿಸಿದೆ  ಎಂದು ಹೇಳಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!