ಹೊಸ ದಿಗಂತ ವರದಿ, ಶಿವಮೊಗ್ಗ :
ಹಿರಿಯ ನಾಗರಿಕರಿಗೆ ಹಾಗು 45 ರಿಂದ 59 ವರ್ಷದ ಆರೋಗ್ಯ ತೊಂದರೆಗಳು ಇರುವವರಿಗೆ ಕೋವಿಡ್ ಲಸಿಕೆಯನ್ನು
ಮಾ.1ರಿಂದ ನೀಡಲಾಗುತ್ತಿದೆ.
ವೊದಲ ಹಂತದಲ್ಲಿ ಎಲ್ಲಾ ತಾಲೂಕು ಸಾರ್ವಜನಿಕ ಆಸ್ಪತ್ರೆಗಳಲ್ಲಿ ಹಾಗು ಶಿವವೊಗ್ಗದ ಸರ್ಜಿ ಆಸ್ಪತ್ರೆ ಮತ್ತು ಸುಬ್ಬಯ್ಯ ಮೆಡಿಕಲ್ ಕಾಲೇಜಿನಲ್ಲಿ ಲಸಿಕೆ ನೀಡಲಾಗುತ್ತದೆ. ಫಲಾನುಭವಿಗಳು ಆನ್ಲೈನ್ನಲ್ಲಿ ಆರೋಗ್ಯ ಸೇತು ಆ್ ಮುಖಾಂತರ ದಾಖಲು ಮಾಡಿಸಬಹುದು ಅಥವಾ ಆನ್ ಸೈಟ್ ಸ್ಪಾಟ್ ದಾಖಲಾತಿ ಮಾಡಿಕೊಂಡು ಲಸಿಕೆ ಪಡೆಯಬಹುದು.
ಎಲ್ಲಾ ಫಲಾನುಭವಿಗಳು ತಮ್ಮ ಯಾವುದಾದರು ಗುರುತಿನ ಚೀಟಿ ಆಧಾ್ ಕಾರ್ಡ್, ಡ್ರೈವಿಂಗ್ ಲೈಸ್ಸ್ , ವೋಟ್ ಐಡಿ, ಮತ್ತು ವೊಬೈಲ್ ಜೊತೆಗೆ ಕೋವಿಡ್ ವ್ಯಾಕ್ಸಿನ್ ಸೆಂಟ್ಗೆ ಬಂದು ಲಸಿಕೆ ಪಡೆಯಬಹುದು ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಪ್ರತೀ ಡೋಸ್ ಗೆ 250 ರೂ. ಪಾವತಿಸಬೇಕು. ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಲಸಿಕೆ ನೀಡಲಾಗುತ್ತದೆ ಸಾವಜನಿಕರು ಈ ಆರೋಗ್ಯ ಸಂಸ್ಥೆಗಳಲ್ಲಿ ಲಸಿಕೆ ಪಡೆಯುವಂತೆ ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.