Friday, August 19, 2022

Latest Posts

ಕೋವಿಡ್ ಲಸಿಕೆ ಪಡೆದು ಇತರರಿಗೆ ಮಾದರಿಯಾದ 96 ವರ್ಷದ ವೃದ್ಧೆ!

ಹೊಸ ದಿಗಂತ ವರದಿ, ಬಳ್ಳಾರಿ:

ದೇಶಾದ್ಯಂತ ಎರಡನೇ ಹಂತದ ಕೋವಿಡ್ ಲಸಿಕೆ ಹಂಚಿಕೆ ಅಭಿಯಾನ ಈಗಾಗಲೇ ಆರಂಭವಾಗಿದೆ. 60 ವರ್ಷದ ಮೇಲ್ಪಟ್ಟ ಜನರಿಗೆ ಕೋವಿಡ್ ಲಸಿಕೆ ನೀಡಲಾಗುತ್ತಿದೆ. ಆದರೆ, ಬಹುತೇಕ ಜನರು ಕೋವಿಡ್ ಲಸಿಕೆ ಪಡೆಯಲು ಹಿಂದೇಟು ಹಾಕುತಿದ್ದಾರೆ. ಆದರೆ, ಗಣಿನಾಡು ಬಳ್ಳಾರಿಯ 96 ವರ್ಷದ ಅಜ್ಜಿ ಲಸಿಕೆ ಪಡೆದು ಇತರರಿಗೆ ಮಾದರಿಯಾಗಿದ್ದಾಳೆ. ಬಳ್ಳಾರಿಯ ಕೌಲಬಜಾರ್ ನಿವಾಸಿಯಾದ ಗಂಗಮ್ಮಾ ಎಂಬ 96 ವರ್ಷದ ಅಜ್ಜಿ ಬಳ್ಳಾರಿ ಜಿಲ್ಲಾ ಆಸ್ಪತ್ರೆಗೆ ಬಂದು ಲಸಿಕೆ ಪಡೆದಿದ್ದಾಳೆ. ಯಾವುದೇ ಕಾಯಿಲೆ ಇಲ್ಲದಿರುವ ಅಜ್ಜಿ ತನ್ನ ಮೊಮ್ಮಕ್ಕಳು ಜೊತೆಯಲ್ಲಿ ಬಂದು ಜಿಲ್ಲಾ ಆಸ್ಪತ್ರೆಯಲ್ಲಿ ಲಸಿಕೆಯ ಮೊದಲ ಡೋಜ್ ಪಡೆದಿದ್ದಾಳೆ. ಬಳಿಕ ಆರೋಗ್ಯ ಇಲಾಖೆಯ ಸಿಬ್ಬಂದಿ ಅಜ್ಜಿಗೆ ಲಸಿಕೆ ನೀಡಿದ ಬಳಿಕ ಅವರ ಆರೋಗ್ಯ ಪರೀಕ್ಷೆ ಮಾಡಿದ್ದಾರೆ. ಯಾವುದೇ ಸುಸ್ತು ಆಯಾಸ ಕಾಣದ ಅಜ್ಜಿಯನ್ನು ಮನೆಗೆ ಕಳುಹಿಸಿಕೊಟ್ಟಿದ್ದಾರೆ. ಇನ್ನು ಲಸಿಕೆ ಪಡೆಯಲು ಬಂದ ಅಜ್ಜಿಯ ಉತ್ಸಾಹಕ್ಕೆ ಆರೋಗ್ಯ ಇಲಾಖೆಯ ಸಿಬ್ಬಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!